Secret of Kannada ಕನ್ನಡದ ಗುಟ್ಟು Kannadada Guttu

Advertise on podcast: Secret of Kannada ಕನ್ನಡದ ಗುಟ್ಟು Kannadada Guttu

Categories
This podcast has
90 episodes
Language
Explicit
No
Date created
2020/01/11
Latest episode
2026/01/04
Average duration
10 min.
Release period
42 days

Description

Explore varied topics to unlock the secrets of Kannada Language ಕನ್ನಡದ ಗುಟ್ಟನ್ನು ರಟ್ಟು ಮಾಡುವ ವಿವಿಧ ವಿಷಯಗಳ ವಿಚಾರ Read at http://kannadakali.com Watch at http://youtube.com/channel/UCCON6n4lEgj6NsPqCLZdDSw Kannada Kali : Kannadada Guttu

Unlock Secret of Kannada ಕನ್ನಡದ ಗುಟ್ಟು Kannadada Guttu podcast Email contact info,
Listeners & Audience details

Email contact information

Direct podcast contact details

Listeners

Audience numbers & engagement insights

Audience details

Podcast Insights

Podcast episodes

Check latest episodes from Secret of Kannada ಕನ್ನಡದ ಗುಟ್ಟು Kannadada Guttu podcast


ಅರ್ಥದ ಮೊದಲ ಅರ್ಥವೇ ಅರ್ಥ! The First Meaning of Artha is Artha Itself!
2026/01/04
👍 Like it? ...... ⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠⁠⁠Subscribe to our newsletter Here, by saying `kuto dhanam', the meaning is meant to be money. So, even for 24 hours ...ChennudiThe first meaning of Artha is meaning!Moment by Moment grain by grainKnowledge and Weatth are to be earned.A grain left is wealth lost;A minute wasted is Knowlede unlearned. - Samayocitapadyamalika (Ka-30)Time (kaala) means passing away; no one can hold it back. But time can be transformed, that is, even a little bit of time can be spent working and earning something useful. That is why Time is Money.Here, by saying `kuto dhanamʼ, the meaning of Artha is money. So, it does not mean that we should spend all 24 hours in the stock market, in interest trading, in moneylending, or in counting the money we have earned.Every moment of life, we gain experiences. Good experiences are the companions of life that stay with us till the end. They are our wealth and meaning. The first meaning of Artha is meaning itself! That is, meaning, hope, and goal. If you want to understand the meaning of life, the ultimate goal, and achieve it, you must engage in good deeds that bring joy and understanding, that are good for yourself and others, and that increase your well-being. You must collect every particle, piece, and fragment of your experiences, squeeze out the essence, gain understanding, and gain knowledge and wealth of Life.This is the inner voice of this Chennudi, and its true meaning.Yours,Vishveshwara Dikshita.The First Meaning of Artha is Meaning Itself!Kannada Kali, Bittarike,January 05, 2026ಇಲ್ಲಿ, ʼಕುತೋ ಧನಂʼ ಅನ್ನುವ ಮೂಲಕ, ಅರ್ಥ ಅನ್ನುವುದಕ್ಕೆ ಹಣ ಅನ್ನುವ ಆಶಯವೇ ಇದೆ. ಹಾಗಂತ, ೨೪ ಗಂಟೆಗಳ ಕಾಲವನ್ನೂ ...ಚೆನ್ನುಡಿಅರ್ಥದ ಮೊದಲ ಅರ್ಥವೇ ಅರ್ಥ!ಕಣ ಕಣವ ಬಿಡದೆ ಚಣ ಚಣವು ಗಳಿಸು ನೀ ಸಿರಿ ತಿಳಿವುಗಳನು. ಬಿಡಲು ಕಣವೊಂದ ಸಿರಿ ಎಂತು? ಕಳೆಯೆ ಚಣವೊಂದ ಕಲಿವೆಂತು?ಸಂಸ್ಕೃತ ಮೂಲ: ಕ್ಷಣಶಃ ಕಣಶಶ್ಚೈವ ವಿದ್ಯಾಮರ್ಥಂ ಚ ಸಾಧಯೇತ್ ಕ್ಷಣತ್ಯಾಗೇ ಕುತೋ ವಿದ್ಯಾ ಕಣತ್ಯಾಗೇ ಕುತೋ ಧನಂ - ಸಮಯೋಚಿತಪದ್ಯಮಾಲಿಕಾ (ಕ-೩೦)ಸಮಯೋಚಿತಪದ್ಯಮಾಲಿಕೆಯಲ್ಲಿ ಕಕಾರದ ಅಡಿಯಲ್ಲಿ ಬರುವ ೩೦ನೆಯ ಶ್ಲೋಕಒಂದೊಂದು ಚಣವೂ ಶ್ರಮಿಸುತ್ತ, ಒಂದೊಂದು ಚೂರೂ ಬಿಡದೆ, ಕಲಿಕೆ ಮತ್ತು ಸಂಪತ್ತುಗಳನ್ನು ಗಳಿಸಬೇಕು. ಅದನ್ನೆ "ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು" "ತೆನೆ ತೆನೆ ಕೂಡಿದರೆ ರಾಶಿ" ಅಂತ ಕನ್ನಡದ ಗಾದೆಗಳು ಹೇಳುತ್ತವೆ.ಸಮಯ (ಕಾಲ) ಅಂದರೆ ಕಳೆದು ಹೋಗುವುದು ಅಂತಲೇ ಅರ್ಥ; ಅದನ್ನು ಯಾರಿಂದಲೂ ಹಿಡಿದಿಡಲು ಆಗದು.‌ ಆದರೆ ಸಮಯವನ್ನು ರೂಪಾಂತರಿಸಬಹುದು, ಅಂದರೆ ಚಣ ಚಣವೂ ಸಮಯವನ್ನು ಕೆಲಸದಲ್ಲಿ ತೊಡಗಿಸಿ ಉಪಯುಕ್ತವಾದುದನ್ನು ಸಂಪಾದಿಸಬಹುದು. ಅದಕ್ಕೇ Time is Money ಅಂತ.‌ ಇಲ್ಲಿ, ʻಕುತೋ ಧನಂʼ ಅನ್ನುವ ಮೂಲಕ, ಅರ್ಥ ಅನ್ನುವುದಕ್ಕೆ ಹಣ ಅನ್ನುವ ಆಶಯವೇ ಇದೆ. ಹಾಗಂತ, ೨೪ ಗಂಟೆಗಳ ಕಾಲವನ್ನೂ ಷೇರುಪೇಟೆಯಲ್ಲಿ, ಬಡ್ಡಿ ವ್ಯವಹಾರದಲ್ಲಿ, ಲೇವಾದೇವಿಯಲ್ಲಿ, ಅಥವ ಗಳಿಸಿದ ಹಣವನ್ನು ಎಣಿಸುವುದರಲ್ಲಿ ತೊಡಗಿಸಬೇಕು ಅಂತಲ್ಲ. ಜೀವನದ ಪ್ರತಿ ಕ್ಷಣವೂ ನಾವು ಗಳಿಸುತ್ತಿರುವುದು ಅನುಭವಗಳು. ಒಳ್ಳೆಯ ಅನುಭವಗಳೆ ಕೊನೆಯವರೆಗೂ ನಮ್ಮೊಡನೆ ಇರುವ ಬಾಳ ಸಂಗಾತಿ. ಅವೇ ನಮ್ಮ ಸಂಪತ್ತು ಮತ್ತು ಅರ್ಥ. ಅರ್ಥದ ಮೊದಲ ಅರ್ಥವೇ ಅರ್ಥ! ಅಂದರೆ meaning,ಆಶಯ, ಗುರಿ ಅಂತ. ಬಾಳಿನ ಅರ್ಥ, ಅರ್ಥಾತ ಗುರಿಯನ್ನು ಅರಿತು ಸಾಧಿಬೇಕಾದರೆ ಚಣಚಣವನ್ನೂ ತಿಳಿವನ್ನು ತರುವ, ತನಗೆ ಮತ್ತು ಇತರರಿಗೆ ಒಳ್ಳೆಯದಾಗುವ, ಸೌಖ್ಯವನ್ನು ಹೆಚ್ಚಿಸುವ ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡು ಒಂದೊಂದು ಕಣ, ತುಂಡು, ಚೂರು ಅನುಭವಗಳನ್ನೆಲ್ಲ ಸಂಗ್ರಹಿಸಿ, ಸಾರವನ್ನು ಹಿಂಡಿ, ತಿಳಿವನ್ನು ಹೊಂದಿ ಬಾಳಸಿರಿಯನ್ನು ಹೊಂದಬೇಕು. ಇದು ಈ ಚೆನ್ನುಡಿಯ ಒಳದನಿ ಆಗಿದೆ, ನಿಜವಾದ ಅರ್ಥವೂ ಆಗಿದೆ.ನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತ.ಅರ್ಥದ ಮೊದಲ ಅರ್ಥವೇ ಅರ್ಥ!ಕನ್ನಡ ಕಲಿ, ಬಿತ್ತರಿಕೆ, January 05, 2026
more
World Philosophy Day Talk ಈಗಿನ ತತ್ತ್ವವಿದ್ಯಾಭ್ಯಾಸಕ್ಕೆ ಕೆಲವು “ರೋಮಾಂಚಕ ದಿಗಂತಗಳು”
2025/12/25
👍 Like it? ...... ⁠⁠⁠⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠⁠ ಈಗಿನ ತತ್ತ್ವವಿದ್ಯಾಭ್ಯಾಸಕ್ಕೆ ಕೆಲವು “ರೋಮಾಂಚಕ ದಿಗಂತಗಳು” ಮೈಸೂರಿನ ಮಾನಸಗಂಗೋತ್ರಿಯ ತತ್ತ್ವಶಾಸ್ತ್ರ ಅಧ್ಯಯನ ಕೇಂದ್ರದವರು, ಸ್ನಾತಕೋತ್ತರ ತತ್ತ್ವಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಆಯೋಜಿಸಿದ “World Philosophy Day-2025” ಪ್ರಯುಕ್ತ S. G. ಸೀತಾರಾಮ್‍ರವರು ಅಲ್ಲಿ ಮಂಡಿಸಿದ ವಾದದ ಧ್ವನಿ ಪ್ರಸ್ತುತಿ.ಕಂಠದಾನ: Dr. H. ಪಾಂಡುರಂಗ ವಿಠಲ ... ಭರದಿಂದ ಬದಲಾಗುತ್ತಿರುವ ವಿದ್ಯಮಾನಗಳು ಚಿತ್ರ-ವಿಚಿತ್ರ ಸವಾಲುಗಳನ್ನೊಗೆದು, ಒಂದರ ಮೇಲೊಂದು ಆಹ್ವಾನ-ಅವಕಾಶಗಳನ್ನು ’ಉದುರಿಸು’ತ್ತಿರುವ ಈ ಸಂಧಿಯಲ್ಲೂ, ಪ್ರಾಚೀನ ಕಾಲದ, ಪುರಾತನ ಸಮಾಜದ, ಅದರಲ್ಲೂ ಕೆಲವೇ ಆಯ್ದ, ಸೀಮಿತ- ಮತೀಯ, ಪರಸ್ಪರ-ವಿರೋಧಿ ಸಿದ್ಧಾಂತಗಳಷ್ಟನ್ನೇ ಸಾರ್ವತ್ರಿಕ, ಸಾರ್ವಕಾಲಿಕ, ಸತ್ಯಗಳೆಂದೂ, ಅವುಗಳ ಪ್ರವರ್ತಕರ ವಾದಗಳೇ ಪರಮಾರ್ಥಗಳೆಂದೂ, ಭಯ-ಭಕ್ತಿ-ನಿಷ್ಠೆಗಳಿಂದ ತಲೆಬಾಗಿ, ಭೂತಕಾಲಕ್ಕೇ ಜೋತುಬಿದ್ದು, ಇಂದಿಗೂ, ಮುಂದಕ್ಕೂ, ಹಿಂಡಿದ ಹಿಪ್ಪೆಯನ್ನೇ ಚಪ್ಪರಿಸುತ್ತ, ಜಳ್ಳನ್ನೇ ಮತ್ತೆ-ಮತ್ತೆ ಜಗಿದು, ಬಲವಂತವಾಗಿ ನುಂಗಿಕೊಳ್ಳುತ್ತ ಹೋದರೆ, ತತ್ತ್ವವಿಷಯ ವಿಕಾಸಕ್ಕೆ ಪುಷ್ಟಿ ಹೇಗೆ ದೊರೆತೀತು? ... --- Read the fill article here https://kannadakali.com/article/reflection/nuhorizonsforphilosophy.html Some “Exciting Horizons” for Contemporary Philosophy A sound presentation of the argument presented by S. G. Seetharam, Mysore, at the Department of Postgraduate Philosophy Studies there on the occasion of “World Philosophy Day-2025”.Vocals: Dr. H. Panduranga Vitthal... Even in this era when rapidly changing phenomena are posing strange challenges and ‘throwing’ one invitation and opportunity after another, if we bow our heads out of fear, devotion and loyalty, clinging to the past, considering only the few selected, limited, and contradictory theories of ancient times and ancient societies as universal, eternal, truths, and the arguments of their proponents as the ultimate meanings, and continue to chew the same straw, chewing the same water again and again, and forcibly swallowing it, how can we find nourishment for the development of philosophy? ...
more
For the sake of Name! ಹೆಸರಿಗಾಗಿ! Hesarigāgi !
2025/12/13
👍 Like it? ...... ⁠⁠⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠ಹೆಸರಿಗಾಗಿ!ನಿಜ ಜೀವನದ ಘಟನೆಗಳ ಹಾಸ್ಯಮಯ ರೋಚಕ ನಿರೂಪಣೆಬರೆಹ * ಓದು: ವಿಶ್ವೇಶ್ವರ ದೀಕ್ಷಿತಮರೆಯಲಾಗದ ಕರೆಗಂಟೆ - ನಾನೂ ಅಪ್ಪ ಆಗುವೆ!ನೀರವತೆ ತುಂಬಿದ ಆಫೀಸಿನಲ್ಲಿ ಎಳೆಯುತ್ತಿರುವ ಮಧ್ಯಾಹ್ನದ ಒಂದು ವಿದ್ಯುತ್ ಕ್ಷಣ. ಟಿಣ್ ಟಿಣಿಸುತ್ತಿದ್ದ ದೂರವಾಣಿಯನ್ನು ಎತ್ತಿಕೊಂಡೆ. ಅತ್ತ ನನ್ನ ಹೆಂಡತಿ. ಅವಳ ಮಾತು ಕೇಳಿ ಮೂಕನಾದ ನಾನು ಕೆಲಸದ ಮೇಲೆ ಗಮನ ಇಡಲಾರದಾದೆ. ಎಲ್ಲ ಮೀಟಿಂಗುಗಳನ್ನು ರದ್ದುಗೊಳಿಸಿದೆ. ಹಿಗ್ಗಿನಿಂದ ಎದೆ ಉಬ್ಬಿಸಿ ಗೂಡಿನಿಂದ ಗೂಡಿಗೆ ಹಾರಾಡಿದೆ. ಎಂದಿಗಿಂತ ಹೆಚ್ಚಿನ ನಗುಮೊಗದಿಂದ ಎದುರು ಬಂದವರೆಲ್ಲರ ಕೈ ಕುಲುಕುತ್ತ ಓಡಾಡಿದೆ. ನಾನೂ ಅಪ್ಪ ಆಗುವೆ ಎಂದು ಪುಲಕಿತನಾದೆ.ಸಂಜೆಯ ವೇಳೆಗೆ ಆ ಪುಳಕವೆಲ್ಲ ಮೈ ಇಳಿದು ಪರಿಸ್ಥಿತಿ ಗಂಭೀರವಾಯಿತು. ಹೆಸರು ಬಹಳ ಮಹತ್ವ. ಹೆಸರೊಂದು ಇಡಿ ಜೀವನದ ಗತಿಯನ್ನೆ ನಿರ್ಧರಿಸಿ ಬಿಡಬಹುದು. ಕೂಸಿಗೆ ಏನು ಹೆಸರು ಇಡುವುದು ಎನ್ನುವ ಸರಳ ಪ್ರಶ್ನೆ ದಂಗು ಬಡಿಸಿತು. ಈ ವಿಷಯವನ್ನು ತಪ್ಪಿಯೂ ಕಲಿಸಿರದ ಸಾಲೆಗಳಿಗೆ ಕಾಲು ಹೊಸೆದಿದ್ದು ದಂಡ ಎನಿಸಿತು.ಯೋಜನೆಗಳು[ಇರಲಿ!] ಹೆಸರಿಗಾಗಿ, ಏನ ಕೇನ ಪ್ರಕಾರೇಣ ಎನ್ನುವಂತೆ, ಒಂದು ಯೋಜನೆ ಹಾಕಿದೆ: ಹೆಸರುಗಳ ಪುಸ್ತಕಗಳನ್ನು ಓದುವುದು; ಗೆಳೆಯರನ್ನು, ಹಿರಿಯರನ್ನು, ಮತ್ತಿತರ ಹೆಮ್ಮೆಯ ತಾಯಿತಂದೆಯರನ್ನು ಕೇಳುವುದು; ಇಂಟರ್‌ನೆಟ್ ಮೂಲಕ ಸಿಗಬಹುದಾದ ಮಾಹಿತಿಯನ್ನು ಜಾಲಾಡಿಸಿ ಹೆಸರು ಹುಡುಕುವುದು. ಕವಿರಾಜ ಮಾರ್ಗವನ್ನು ಹಿಡಿದು, ಹರಿಹರನೊಡನೆ ರಗಳೆ ಗೈದು, ನಾಗರಸನನ್ನು ಕೆದಕಿ, ಮುದ್ದಣನೊಡನೆ ಸರಸವಾಡಿ ಸವಿ ಕನ್ನಡ ಹೆಸರೊಂದನ್ನು ಸಂಪಾದಿಸುವುದು. ಒಂದು ಹೆಸರಿಗಾಗಿ, ವಾಗ್ದೇವಿಯ ಭಂಡಾರದ ಮುದ್ರೆಯನೊಡೆದ ಆ ರನ್ನನೊಡನೆ ಗದಾಯುದ್ಧಕ್ಕೆ ಇಳಿಯಲೂ ಸನ್ನದ್ಧನಾದೆ.ಯೋಜನೆ, ಬರಿ ಯೋಜನೆಎಲ್ಲ ಒಳ್ಳೆಯ ಯೋಜನೆಗಳಂತೆ ಇದೂ, ನಿರ್ವಹಿಸದೆ, ಬರಿ ಯೋಜನೆಯಾಗಿಯೆ ಉಳಿಯಿತು. ತಿಂಗಳುಗಳು ಉರುಳಿ ಹೋಗುತ್ತಿರುವಾಗ, ನನ್ನ ಮುಂದೂಡುವ ಪ್ರವೃತ್ತಿಯನ್ನು ಸಮರ್ಥಿಸಿಕೊಳ್ಳಲು ತಾತ್ವಿಕತೆಯ ಸುಲಭ ಸೋಗೊಂದು ಥಟ್ಟನೆ ಬೇಕಾಯಿತು. ಈಗ, ನನಗೆ ಅನುಕೂಲವಾದದ್ದು ಶೇಕ್ಸ್‌ಪಿಯರನ ನಾಟಕೀಯ ಮಾತು, "ಹೆಸರಿನಲ್ಲೇನಿದೆ? ಯಾವುದನ್ನು ಗುಲಾಬಿ ಎಂದು ಕರೆಯುತ್ತೇವೆಯೋ ಅದು ಬೇರೆ ಯಾವುದೇ ಹೆಸರಿನಿಂದಲೂ ಅಷ್ಟೇ ಕಂಪು ಬೀರುತ್ತದೆ!" ಮೇಲಾಗಿ, ಇನ್ನೂ ಏಳು ತಿಂಗಳುಗಳು ಇವೆ! ಸದ್ಯಕ್ಕೆ ಸ್ವಲ್ಪ ಚೇತರಿಸಿಕೊಂಡೆ. ಮಗು ಹುಟ್ಟುವ ಮುಂಚೆ ಸಾವಿರ ಹೆಸರುಗಳನ್ನು ಕಂಡು ಹಿಡಿಯುವೆನೆಂಬ ಆತ್ಮ ವಿಶ್ವಾಸ ಒಮ್ಮೆಲೆ ಬಲವಾಯಿತು.ವಿಶೇಷ ಘಟನೆ ಇಲ್ಲದೆ ಆರು ತಿಂಗಳುಗಳು ಕಳೆದು ಹೋದರೂ ಹೆಸರು ಒಂದೂ ಸಿಕ್ಕಿರಲಿಲ್ಲ. ಯಾವಾಗಲೂ ಹೆಸರಿನ ವಿಚಾರ. ಒಂದು ದಾರಿಯನ್ನೂ ಸರಿಯಾಗಿ ಯೋಚಿಸಿರಲಿಲ್ಲ.ಐಡಿಯ ನಂಬರ್‌ ಒನ್[ಅಹಾ!] ಒಂದು ಐಡಿಯ ಹೊಳೆಯಿತು. ಕೂಸು ನನ್ನೊಬ್ಬನದೇ ಅಲ್ಲ. ಮಗು ಆಗುವುದು ನನ್ನ ಹೆಂಡತಿಗೂ ತಾನೆ? ಹೀಗೆ, ಈ ಹೆಸರಿನ ಹೊಣೆಯಿಂದ ನುಸುಳಿಕೊಳ್ಳುವ ಹವಣಿಕೆಯಲ್ಲಿ ಹಗುರವಾಗಿ ಕೇಳಿದೆ, "ಕೂಸಿಗೆ ಹೆಸರು ಏನಾದರು ಹುಡುಕಿರುವೆಯ?" ಅವಳ ಐಡಿಯ ಬೇರೆಯೆ ಆಗಿತ್ತು. "ಆರೋಗ್ಯವಾದ ಉತ್ತಮ ಮಗು ಹುಟ್ಟುವಂತೆ ನಾನು ನೋಡಿಕೊಳ್ಳುತ್ತೇನೆ" ಎಂದು ಅಳುಕದೆ ಮುಂದುವರಿಸಿದಳು, "ಕೂಸಿಗೊಂದು ಉತ್ತಮ ಹೆಸರು ನೀವು ನೋಡಿಕೊಳ್ಳಿ." ಈಗ, ಜವಾಬುದಾರಿಯ ಪೆಂಡುಲಂ ಪೂರ್ತಿ ನನ್ನ ಕಡೆಗೆ ವಾಲಿತು. ಗಡಿಯಾಳ ಮಾತ್ರ ಟಿಕ್‌ಟಿಕ್‌ಗುಟ್ಟುತ್ತಲೆ ಇತ್ತು.ಕೊರೆಯುವ ಸಮಸ್ಯೆ – ತಿವಿಯುವ ಗೆಳೆಯರುಈಗಂತು, ಮುದ್ದಾದ ಹೆಸರಿಟ್ಟು ಮಕ್ಕಳ ಜೊತೆ ಆಡುತ್ತಿದ್ದ ಗೆಳೆಯರನ್ನು ಕಂಡರೆ ಮನಸ್ಸಿನಲ್ಲಿ ಏನೋ ಕರಕರೆ. ಕಂಡರೂ ಕಾಣದಂತಿದ್ದ ಇವರು ಸಮಸ್ಯೆಯನ್ನು ನೆನಪಿಸುತ್ತ ನನ್ನ ಸುತ್ತ ತಿರುಗುತ್ತಿದ್ದಾರೆ ಎನ್ನಿಸಿತು.ಹೆಸರಿಲ್ಲದೆ ಹೆರದಿರಿ, ಹೆಸರಿಲ್ಲದೆ ಬಸುರಾಗದಿರಿನನ್ನ ಹೆಸರಿನ ಸಮಸ್ಯೆಯನ್ನು ಪ್ರಸ್ತಾಪಿಸಿ ಅದರ ಬೇಕುಬೇಡಗಳನ್ನು ವಿಶ್ಲೇಷಿಸಿ ಎಷ್ಟು ಸಂತೊಷಕೂಟಗಳನ್ನು ಅಂತ್ಯಗೊಳಿಸಿದೆನೋ! ಆಮಂತ್ರಿತ ಮದುವೆಗಳಿಗೆ ಹೋದಾಗ, ವಧೂವರರಿಗೆ ಕಾಣಿಕೆಯೊಂದಿಗೆ "ಕೂಸು ಹುಟ್ಟುವ ಮುಂಚೆ ಕುಲಾವಿ ಎನ್ನುವ ಗಾದೆಯನ್ನು ಮರೆತು ಬಿಡಿ. ಹೆಸರಿಲ್ಲದೆ ಹೆರದಿರಿ, ಹೆಸರಿಲ್ಲದೆ ಬಸುರಾಗದಿರಿ" ಎಂದು ಮೌನವಾಗಿ ಹರಸಿ ಬರುತ್ತಿದ್ದೆ.ಗಾಂಧಾರಿಯ ಗುಟ್ಟುನೂರೊಂದು ಕೌರವರನ್ನು ಯಾರು ಅರಿಯರು? ಒಂದು ನೂರ ಒಂದು ಹೆಸರುಗಳನ್ನು ಆ ಗಾಂಧಾರಿ ಧೃತರಾಷ್ಟ್ರರು ಹೇಗೆ ಕಂಡು ಹಿಡಿದರು? ಅವರಿಗೇನು ನೂರು ವರ್ಷಗಳ ಸಮಯ ಇರಲಿಲ್ಲ. ಒಮ್ಮೆಲೆ, ಗಾಂಧಾರಿ ಧೃತರಾಷ್ಟ್ರರಿಗಾಗಿ ನನ್ನಲ್ಲಿದ್ದ ಮೆಚ್ಚಿಕೆ ನೂರ್ಮಡಿ ಆಯ್ತು. ಕೌರವರನ್ನು ಹೊತ್ತ ಗಾಂಧಾರಿಗೆ ಅವು ಸಂತಾಪರಹಿತ ದಿನಗಳೇನು ಆಗಿರಲಿಲ್ಲ. ಕತೆ ಕೇಳಿ. ಬೇಗನೆ ಗಂಡು ಮಗು ಆಗಲಿ ಎಂದು ಬೇಡಿಕೊಂಡವಳು ಹೆರಿಗೆಯನ್ನು ಎರಡು ವರ್ಷಗಳ ವರೆಗೆ ತಡೆ ಹಿಡಿದಳು! ಯಾಕೆ ಗೊತ್ತೆ? ಅವಳಿಗೆ ಸರಿಯಾದ ಹೆಸರು ಸಿಕ್ಕಿರಲಿಲ್ಲ! ಬೇಸತ್ತು, ಕೊನೆಗೆ ಭ್ರೂಣವನ್ನೆ ಕಿತ್ತು ಹಾಕಿದಳು ಗಾಂಧಾರಿ! ನೂರು ಮಕ್ಕಳು ಆಗಲಿ ಎಂದ ವ್ಯಾಸನ ವರ ಅವಳಿಗೆ ನೂರಕ್ಕೆ ನೂರರಷ್ಟು ಶಾಪವಾಗಿದ್ದರಲ್ಲಿ ಸಂಶಯವಿಲ್ಲ. ಮಾತು ಕೊಟ್ಟ ವ್ಯಾಸ ಸುಮ್ಮನೆ ಬಿಡಬೇಕಲ್ಲ. ಭ್ರೂಣವನ್ನು ನೂರು ತುಂಡುಗಳಲ್ಲಿ ಕತ್ತರಿಸಿ ಮಣ್ಣಿನ ಕುಡಿಕೆಗಳಲ್ಲಿ ಮುಚ್ಚಿ ಇಟ್ಟ. ಜಾಣ, ಹೆಸರು ಹುಡುಕುವ ಹೆಚ್ಚಿನ ಜವಾಬುದಾರಿಯನ್ನು ಮಾತ್ರ ತಾನು ತೆಗೆದುಕೊಳ್ಳಲಿಲ್ಲ. ಕಣ್ಣು ಕಟ
more
Fort Builders - ಕೋಟೆ ಕಟ್ಟುವರು - Kōṭe Kaṭṭuvaru
2025/11/06
👍 Like it? ...... ⁠⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠⁠⁠⁠Subscribe to our newsletter ಕೋಟೆ ಕಟ್ಟುವರು ಒಂದು ಸ್ವ-ರಚಿತ ಕವನ ವಾಚನವಿಶ್ವೇಶ್ವರ ದೀಕ್ಷಿತಮುನ್ನುಡಿ:ತಾನು ಎನ್ನುವ ಅರಿವು ಜೀವದ ಕುರುಹು. ಅಮೀಬದಂಥ ಏಕಕೋಶ ಜೀವಿಯಿಂದ ಹಿಡಿದು, ಅತ್ಯಂತ ಸಂಕೀರ್ಣ ಮನುಷ್ಯನ ವರೆಗೂ, ತಾನು ಎನ್ನುವುದು ಬೇರೆ ಬೇರೆ ಸ್ತರದಲ್ಲಿ ಇದೆ. ಮನುಷ್ಯನಲ್ಲಿ ಅದು ಪರಾಕಾಷ್ಠತೆಗೆ ಏರಿದೆ. ಒಂದು ರೀತಿಯಲ್ಲಿ, ಅದು ಕರಾಳತೆಯ ಕಡೆಗೆ ಹೊರಳಿದೆ. ತನ್ನ ಬದುಕು ಉಳಿವಿಗಾಗಿ ಅಲ್ಲದೆ, ಪ್ರಾಣಿ ಪ್ರಾಣಿಗಳಲ್ಲಿ ಅಲ್ಲದೆ, ತಮ್ಮತಮ್ಮಲ್ಲೆ ಭೇದ ಭಾವಗಳನ್ನು ಕಲ್ಪಿಸಿಕೊಳ್ಳುತ್ತ, ಇತರರ ಜೀವನವನ್ನು ಹಾಳು ಮಾಡುವುದೆ ಗುರಿಯಾದಂತೆ ಕಾಣುತ್ತದೆ. ಪರರ ನಷ್ಟವೇ ತನ್ನ ಲಾಭ, ಪರರ ದುಃಖವೇ ತನ್ನ ಸುಖ, ಪರರ ಕ್ಷೋಭೆಯೆ ತನಗೆ ಶಾಂತಿ ಎನ್ನುವಂತಾಗಿದೆ. ಇದು ಹಿಂದಿನಿಂದಲೆ ಹತ್ತಿಕೊಂಡ ಪಿಡುಗು. "ಮನುಷ್ಯ ಜಾತಿ ತಾನೊಂದೆ ವಲಂ" ಎಂದ ಪಂಪನ ಮಾತನ್ನು ಯಾರೂ ಕೇಳಿಸಿಕೊಳ್ಳುವುದಿಲ್ಲ. ಆರು ಶತಮಾನಗಳ ನಂತರದ ಸರ್ವಜ್ಞನ ನುಡಿ "ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು, ಸುಡುವಗ್ನಿಯೊಂದೆ ಇರುತಿರಲು, ಕುಲಗೋತ್ರ ನಡುವೆ ಎತ್ತಣದು? ಸರ್ವಜ್ಞ."ಯಾರಿಗೂ ಕೇಳುವುದೆ ಇಲ್ಲ.ಅಸಮಾನತೆ ಇದ್ದಾಗಲೂ ಸಮಾನತೆಯಿಂದ ಬಾಳುವುದು ಮನುಷ್ಯತ್ವ ಎಂದಾದರೆ ಅದು ವಿರಳವಾಗಿದೆ. ಸಮಾನತೆ ಇದ್ದಾಗಲೂ ಅಸಮಾನತೆ ಕಲ್ಪಿಸಿಕೊಳ್ಳುವುದೆ ಈಗ ಮನುಷ್ಯನ ಕುರುಹಾಗಿದೆ. ವಿಚಿತ್ರವೆಂದರೆ, ಇಂಥ ಕರಾಳತೆಯನ್ನು ಮೀರುವ ಶಕ್ತಿ ಕೂಡ ಇರುವುದು ಮನುಷ್ಯನಲ್ಲಿಯೆ. ಹಾಗಾಗಿ, ಆಯ್ಕೆ ಮಾಡಿಕೊಳ್ಳಲು ಮನುಷ್ಯ ಸ್ವತಂತ್ರನೇ ಎಂದು ಪ್ರಶ್ನಿಸುವಂತಾಗಿದೆ.ಕೋಟೆ ಕಟ್ಟುವರು ಕಟ್ಟುವರು : ಮನೆ ಸುತ್ತ, ಮನ ಸುತ್ತ ಕಾಂಕ್ರೀಟು ಕಟ್ಟಿಗೆ ಉಸುಕು ಇಟ್ಟಿಗೆ ಅರಳು ಮರಳು ಏನೆಲ್ಲ ವಿಷಯಗಳ ಬೆರೆಸಿ ಕೋಟೆ ಕಟ್ಟುವರು. ಅದು ಇದು ಎಂದು ಗೆರೆ ಎಳೆಯುವರು; ನಾನು ನನ್ನವರೆಂದು, ನೀನು ನಿನ್ನವರೆಂದು ಗೋಡೆ ಕಟ್ಟುವರು. ಅವರು ಇವರೆಂದು ಕಂದಕ ತೋಡುವರು; ಒಳಗೆ ಹೊರಗೆಂದು ಪೊರೆ ಬೆಳೆಸಿಕೊಳ್ಳುವರು. ಕುಲ ಜಾತಿ ನೀತಿ ಎಂದು ಬೇರೆ ಎಣಿಸಿಕೊಳ್ಳುವರು; ಮತ ಪಂಥ ಎಂದು ಕವಲೊಡೆದುಕೊಳ್ಳುವರು. ಮನಸು ಮುಚ್ಚಿ ಕನಸಲ್ಲಿ ನನಸು ಕಟ್ಟುವರು. ಕಣ್ಣು ಮುಚ್ಚಿ ಇರವನ್ನೆ ಅಲ್ಲಗಳೆಯುವರು;ಕಟ್ಟಿ ಅರಳಿಸಿ ಆದರಿಸುವರು : ಏಳು ಸುತ್ತಿನ ಮಲ್ಲಿಗೆ, ಎಸಳು ಎಸಳಿನ ಗುಲಾಬಿ, ತಂಪು ಕಂಪಿನ ಸವಿಕುಡಿಕೆ; ಮಕರಂದ ಆನಂದ ಪಾನಕ್ಕೆ ಅತ್ಮೀಯ ಆಹ್ವಾನ; ಕೋಟೆ ಕಾವಲಿಗಲ್ಲ - ಕರೆದು ಆದರಿಸಲೆಂದು.ಕಟ್ಟಿ ಕೆಡವುವರು : ಎಳೆ ಎಳೆಯ ಸುತ್ತಿ, ಮೈ ಸುತ್ತ ಪೊರೆ ಬೆಳೆಸಿ, ಗೂಡಲ್ಲಿ ಗೂಢವಾಯಿತು ಧ್ಯಾನಸ್ಥ ಚಿಟ್ಟೆಮರಿ; ರೂಪಾಂತರದ ಚಮತ್ಕಾರ; ಜೀವ ಸಂತತ ಸಾಕ್ಷಾತ್ಕಾರ. ಕೋಟೆ ಕಾವಲಿಗಲ್ಲ‌ - ಹರಿದು ಹೊರಬರಲೆಂದು, ಮನ ತೆರೆದು ತೋರಿಸಲೆಂದು.ಆಯ್ಕೆ ನಮ್ಮದು.ನಿಮ್ಮವನೇ ಆದ, ವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, ನವಂಬರ್‌ ೧, ೨೦೨೫.ಕೋಟೆ ಕಟ್ಟುವರು.ಕವನ ಮತ್ತು ವಾಚನ: ವಿಶ್ವೇಶ್ವರ ದೀಕ್ಷಿತ. --------The Fort BuilderA self-composed poem readingVishweshwara Dixit Preface:The awareness of self is the essence of life. From a single-celled organism like an amoeba to the most complex human being, self is at different levels. In man, it has risen to its peak. In a way, it has turned towards darkness. It seems that it is not just for its own survival, not just among animals,but among themselves; while imagining differences where they do not exist, it seems that it's aim is to ⁠... continued here Therefore, it has become questionable whether man has freedom to choose. Poem: Fort Builders(They) build forts: Around the house, Around the mind Mixing concrete, wood, Sand and bricks, And all kinds of matters. Saying this and that They draw the lines; Saying I and mine, You and yours, They build walls. Saying those and these They dig ditches; Saying inside(rs) and outside(rs) They grow blinders (over their eyes) Saying caste, clan, character The count themselves separate; Saying reigion, creed, sect They fork into ways. With minds closed They build reality in dreams; With eyes closed, They deny the reality.(They) build to Welcome and Cherish: Seven-round jasmine, Rose of many petals, A delicious drink of cool vibration; A dear invitation to drink the nectar; Not a fort to repel and guard - But To invite and cherish.They build and tear down: Wrapped thread by thread, Growing a sheath around, Hidden in the nest, A meditative butterfly; A miracle of transformation; A realization of the life cycle. Not a fort to repel and guard - But to tear out, To open the mind and show.The choice is ours. Yours,Vishweshwara Dixita Kannada Kali Bittarike, Nov 1, 2025.
more
ನಮೋ ಎನ್ನಿರೇ ನಮೋ - You Say Hello, I say namO!
2025/08/05
👍 Like it? ...... ⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠ ದೂರವಾಣಿ "ಟ್ರಿನ್ ಟ್ರಿನ್" ಎಂದ ತಕ್ಷಣ "ಹಲೋ!" ಎನ್ನುವುದು ಸಾಮಾನ್ಯ. ಹಲೋ(ಹೆಲೋ hello) ಎಂದರೆ ಏನು? ಇದರ ಉತ್ಪತ್ತಿ ಹೇಗೆ? ಹಲೋ ಎನ್ನುವ ಶಬ್ದ ಬಳಕೆಯಲ್ಲಿ ಬಂದದ್ದು ಹೇಗೆ? ಇದನ್ನು ಕಂಡು ಹಿಡಿದವರು ಯಾರು? ಇದು ಅಚ್ಚಗನ್ನಡ ಪದವೆ? ಅಲ್ಲವಾದರೆ ಇದಕ್ಕೊಂದು ಅಚ್ಚಗನ್ನಡದ ಸಮಾನ ಪದ ಇದೆಯೆ? ಹೀಗೆ ಪ್ರಶ್ನೆಗಳನ್ನು ಕೇಳುತ್ತ ಹೋಗಬಹದು.Hello ಶಬ್ದದ ಹುಟ್ಟುಹಲೋ ಯಾವುದೋ ಲ್ಯಾಟಿನ್‌, ಗ್ರೀಕ್‌, ಅಥವಾ ಜರ್ಮನ್‌ ಮೂಲದ ಪದ ಇರಬೇಕು ಅಂದುಕೊಳ್ಳುವುದು ಸಹಜ. ಹೆಕ್ಕಿ ನೋಡಿದರೆ, ಇದು ಪ್ರಾಚೀನ ಶಬ್ದವೇನಲ್ಲ. ಟ್ರಿನ್ ಟ್ರಿನ್ ಎಂದು ಕರೆ ಗಂಟೆ ಹೊಡೆದುಕೊಳ್ಳುತ್ತಿರುವ ದೂರವಾಣಿಯನ್ನು ಎತ್ತಿಕೊಳ್ಳಲಾಗಿದೆ ಎಂದು ಸೂಚಿಸಲು ಆ ಕಡೆ ಫೋನ್ ಎತ್ತಿಕೊಂಡವರು ಹೇಳುವುದಕ್ಕೆ ಈ ಪದ ಹುಟ್ಟಿದ್ದು. ಟೆಲೆಫೋನ್ ಕಂಡು ಹಿಡಿದ ಅಲೆಕ್ಸ್ಯಾಂಡರ್ ಗ್ರಾಹಮ್ ಬೆಲ್ ಇದಕ್ಕೆ ಕಾರಣ ಎಂದುಕೊಳ್ಳುವುದು ಸಹಜ. ಆಶ್ಚರ್ಯವೆಂದರೆ ಇದನ್ನು ಪ್ರಚಲಿತಗೊಳಿಸಿದವ ಥಾಮಸ್ ಆಲ್ವಾ ಎಡಿಸನ್.ದೇಶದ ತುಂಬ ದೂರವಾಣಿ ಕೇಂದ್ರಗಳನ್ನು ಸ್ಥಾಪಿಸುವ ಹೊಣೆಯನ್ನು ಅಮೆರಿಕ ಸರಕಾರ ಎಡಿಸನ್‌ಗೆ ಕೊಟ್ಟಿತ್ತು. ತನ್ನ ಆ ಪ್ರಭಾವವನ್ನು ಉಪಯೋಗಿಸಿ ಎಡಿಸನ್ ಹಲೋ ಬಳಕೆಯನ್ನು ಕಡ್ಡಾಯಗೊಳಿಸಿದನು. ದೂರವಾಣಿ ಹೊತ್ತಿಗೆಗಳಲ್ಲಿ ಹಲೋ ಬಳಕೆಯನ್ನು ನಿಗದಿಸಿದನು.ಅಪರೇಟರುಗಳು ಹಲೋ ಅನ್ನುವುದು ಸಾಮಾನ್ಯವಾಯಿತು. ಅಂತೆಯೆ, ಮುಂಚಿನ ದೂರವಾಣಿ ಆಪರೇಟರುಗಳು "ಹಲೋ ಹುಡುಗಿಯರು" (hello girls)ಎಂದು ಹೆಸರಾಗಿದ್ದರು.೧೮೮೦ರಲ್ಲಿ ನಡೆದ ಟೆಲಿಫ಼ೋನ್ ಕಂಪನಿಗಳ ಮೊದಲ ಸಮಾವೇಶದಲ್ಲಿ ಇನ್ನೊಂದು ಪರಂಪರೆ ಹುಟ್ಟಿಕೊಂಡಿತು. ಪ್ರತಿನಿಧಿಗಳು ಎದೆಗೆ ಅಂಟಿಸಿಕೊಂಡ ಹೆಸರು ಚೀಟಿಗಳ ಮೇಲೆ "ಹಲೋ" ಎನ್ನುವ ಶಬ್ದ ದೊಡ್ಡದಾಗಿ ಇತ್ತು. ಈಗ ಯಾವ ಸಮ್ಮೇಳನ ಸಮಾವೇಶಗಳಲ್ಲು ಕಂಡುಬರುವುದು ಪರಿಚಿತ "ಹಲೋ, ನನ್ನ ಹೆಸರು ..."ದೂರವಾಣಿಯಲ್ಲಿ ಅಲ್ಲದೆ, ಎದುರುಗೊಂಡಾಗ ಕೂಡ, ಕೈ ಕುಲುಕುತ್ತ, ಹಲೋ ಎನ್ನಬಹುದು.ಹಲೋಗೆ ಸಮಾನ ಕನ್ನಡ ಪದ?ಇಂತಹ ಬಹೂಪಯೋಗಿ ಹಲೋಗೆ ಸಮಾನ ಶಬ್ದ ಬೇರೆ ಯಾವ ಭಾಷೆಯಲ್ಲಾದರು ಉಂಟೆ? ಸಂಸ್ಕೃತವೆ ಇದಕ್ಕೆ ಉತ್ತರ. ಅದು "ನಮಃ."ನಮಗೆ ಪರಿಚಿತವಿರುವ ’ನಮಸ್ಕಾರ’, ’ನಮಸ್ತೇ’ ಕೂಡ ’ನಮಃ’ದಿಂದೆ ಬಂದವುಗಳು. ಆದರೆ, ʼನಮಃʼ ದ ವಿಸರ್ಗ, ಕನ್ನಡಕ್ಕೆ ಅಷ್ಟೇ ಅಲ್ಲ, ಯಾವ ಇತರ ಭಾರತೀಯ ಭಾಷೆಗೂ ಒಗ್ಗುವುದಿಲ್ಲ. ಅದಕ್ಕೇ ʼತೇʼ, ʼಕಾರʼ ಗಳನ್ನು ಸೇರಿಸಿಕೊಂಡು ನಮಸ್ತೇ ನಮಸ್ಕಾರ ಅಂತ ಮಾಡಿಕೊಂಡಿರುವುದು.ಸಂಸ್ಕೃತದ ’ನಮಃ’ ಶಬ್ದದ ಒಂದು ರೂಪವಾದ ’ನಮೋ’, ಸಂಧಿ ಸಮಾಸಗಳ ಗೊಡವೆ ಇಲ್ಲದೆ, ಎಲ್ಲಡೆ ಬಳಸಬಹುದಾದ ಸೌಮ್ಯ ಪದ. ʼನಮʼ ದ ಕೊನೆಗೆ ಸೇರಿಕೊಂಡ ದೀರ್ಘ ಸ್ವರ ʼಓʼ (ನಮ+ಓ) ಸಂಬೋಧನಾತ್ಮಕ ನಮ್ರತೆಯ ಸೂಚಕ ಕೂಡ. ನಮೋ - a small word with a big heart - ಚಿಕ್ಕ, ಚೊಕ್ಕ, ಬಹೂಪಯೋಗಿ ಶಬ್ದ. ದೂರವಾಣಿ ಕರೆಯನ್ನು ಉತ್ತರಿಸಬಹುದು, ಎದುರುಗೊಂಡಾಗಲೂ ಹೇಳಬಹುದು. ಸ್ವಲ್ಪ ಎಳೆದು ನಮೋಽಽ ಎಂದರೆ ಸಾಕು, ಎಲ್ಲ ಸದ್ಭಾವಗಳೂ ಹೊಮ್ಮುವವು. ಹೀಗೆ ನಮೋ ಕೃತಕವಲ್ಲ - ಯಾರೂ ಅದನ್ನು ಹುಟ್ಟಿಸಲಿಲ್ಲ. ಇದು ಪುರಾತನ ದೇವವಾಣಿ.ನಮೋ ಎಂದು ಕಾಗದವನ್ನು ಪ್ರಾರಂಭಿಸಬಹುದು. ಮೇಲಾಗಿ, ಪತ್ರ ಮುಗಿಸಲೂ ನಮೋ ಹೇಳಬಹುದು.ಹಲೋ vs ನಮೋಸಂದರ್ಭ : ಬರವಣಿಗೆ ಅಥವಾ ಮಾತುಕತೆ ಆರಂಭದಲ್ಲಿ ಮಾತ್ರ ಹಲೋ ಬಳಸಬಹುದು ; ಆದರೆ "ನಮೋ" ಎಲ್ಲ ಸಂದರ್ಭಗಳಲ್ಲಿ ಹೊಂದಿಕೊಳ್ಳುತ್ತದೆ—ಆರಂಭ, ಅಂತ್ಯ, ವಿದಾಯ, ಸ್ವಾಗತ.ಆರೋಗ್ಯ : ಆರೋಗ್ಯದ ನೋಟದಿಂದಲೂ ʼನಮೋʼದ್ದೆ ಮೇಲುಗೈ! ಅಂದರೆ, ಕೈಜೋಡಿಸಿ ʼನಮೋʼ ಎನ್ನುತ್ತ ದೂರದಿಂದಲೆ ನಮಸ್ಕಾರ ಮಾಡಿದರಾಯ್ತು. ಹೆಲೋ ಹೇಳುತ್ತ ಬೇರೊಬ್ಬರನ್ನು ಮುಟ್ಟಿ ಕೈ ಕುಲುಕುವ ಅವಶ್ಯಕತೆ ಇಲ್ಲ. ವಿಶೇಷವಾಗಿ, ೨೦೨೦ರ ಕೋವಿಡ್‌ ವೈರಾಣು ಪ್ಯಾಂಡೆಮಿಕ್ ಸಮಯದಲ್ಲಿ ಇಂಥ ʼನಮೋ-ನಮಸ್ಕಾರʼ ಸಂಪ್ರದಾಯವನ್ನು ಅಳವಡಿಸಿಕೊಂಡಾಗ, ಮುಜುಗರ ಅಲ್ಲದೆ ಆಪತ್ತಿನಿಂದ ಜನರನ್ನು ಉಳಿಸಿದ್ದು ನಿಜ.ಭಾಷೆ : ಹಲೋ ವಿದೇಶಿ – ನಮೋ ಸ್ವದೇಶಿ. ಮೇಲಾಗಿ, ನಮೋ ಸಾಂಸ್ಕೃತಿಕ ಗುರುತ್ವ ಉಳ್ಳ, ಶುದ್ಧ ಭಾರತೀಯತೆಯ ಸಂಕೇತನೀವು ವಿಚಾರಿಸುತ್ತಿರುವುದು ಸರಿ. ಎದುರುಗೊಂಡಾಗ ಮತ್ತು ಸೇರುವಾಗ, ಕಾಗದ-ಪತ್ರ ಮತ್ತು ಇ-ಮೆಲ್ ಬರೆಯುವಾಗ ಮಾತ್ರವಲ್ಲ, ಬೀಳ್ಕೊಡುವಾಗ ಮತ್ತು ಅಗಲುವಾಗ ಕೂಡ ನಮೋ ಎನ್ನಬಹುದು. ವಿದಾಯ ಹೇಳಲು ಹಲೋ ಎನ್ನಬಹುದೆ? ಪತ್ರದ ಮುಕ್ತಾಯದಲ್ಲಿ ಹಲೋ ಬರೆಯಬಹುದೆ? ಸಾಧ್ಯವಿಲ್ಲ!ಹಲೋ ಕೂಡ ಕನ್ನಡ!ಎಡಿಸನ್‌ಗೆ ಸಂಸ್ಕೃತ ಭಾಷೆ ಪರಿಚಿತವಿತ್ತೇನೊ ಗೊತ್ತಿಲ್ಲ. ಹಲೋ ಹುಟ್ಟಲು ಸಂಸ್ಕೃತದ ’ಹಂಹೋ’, ’ಅಹೋ’, ಅಥವ ಕನ್ನಡದ ʼಎಲವೋʼ, ’ಎಲೋ’, ʼಲೋʼಗಳು ಅಪರೋಕ್ಷವಾಗಿ ಪ್ರಭಾವಿಸಿರಬಹುದೆ?! ದೂರವಾಣಿ ಕರೆ ಉತ್ತರಿಸಿದಾಗ, ಅಚ್ಚ ಕನ್ನಡಿಗನೊಬ್ಬʼಹಹ್ಹ್ʼ ಎಂದು ಗಂಟಲು ಸರಿಪಡಿಸುತ್ತ ʼ(ಎ)ಲೋʼ ಎನ್ನುವ ಚಿತ್ರ ಮೂಡಿ ಸಹಜವಾಗಿ ಕೇಳಿಸುವ ಪದ ʼಹಲೋʼ(ಹೆಲೊ). ಹಾಗೆಂದು, ನಿಜ ಹುಟ್ಟು ಏನೇ ಇರಲಿ, ಹಲೋ ಕೂಡ ಕನ್ನಡ ಪದ ಅನಿಸಿದರೆ ತಪ್ಪಲ್ಲ!ಆದರೂ, ನಮ್ಮ ನೆಲದ "ನಮೋ" ಶಬ್ದವು ವಿನಯ, ಆತ್ಮೀಯತೆ, ಮರ್ಯಾದೆ, ಮತ್ತು ಅತಿಥಿ ಸೌಹಾರ್ದಗಳ ಪ್ರತೀಕ. ಆದ್ದರಿಂದ ’ಹಲೋ’ ಬಳಸುವಲ್ಲೆಲ್ಲ ’ನಮೋ’ ಎನ್ನುವುದು ನಮ್ಮ ಭಾಷೆಗೆ, ಸಂಸ್ಕೃತಿಗೆ, ಹಾಗೂ ಸಂಸ್ಕಾರಕ್ಕೆ ಅತ್ಯಂತ ಔಚಿತ್ಯಪೂರ‍್ಣವಾದದ್ದು. ಕನ್ನಡ ತಾಯಿಯ ಮುಡಿಗೆ ಏರಿಸುವ ಗೌರವ ಪುಷ್ಪವೆ ನಮೋ.‌ಚಿಕ್ಕ ಪದ – ವಿಶಾಲ ಹೃದಯಸಂಸ್ಕೃತದ ನಮೋ ಎಲ್ಲ ಭಾರತೀಯ ಭಾಷೆಗಳಲ್ಲೂ ಹೊಕ್ಕಿದೆ. ವಿನಯ, ಗಾಂಭೀರ್ಯ, ಮರ್ಯಾದೆ, ಆದರ, ಸ್ವಾಗತ ಮುಂತಾದ ಭಾವಗಳನ
more
ಆಕಾಶಾತ್ ಪತಿತಂ - ಬಾನಿಂದ ಬಿದ್ದ : Akashat Patitam Toyam- Baninda Bidda
2025/05/29
👍 Like it? ...... ⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠⁠Subscribe to our newsletter There are 33 crores gods like Shiva, Vishnu, Ganesha, Parvati, Lakshmi; who should I worship? KannudiAkashat patitam : Baninda Bidda Bāninda Bidda (Kannada) bāninda bidda nīrella hariyuvante kaḍalina kaḍege, yā dēvagū itta namana mādēvanaḍigaḷige muḍipu. (As the water that falls from the sky flows towards the ocean,so do salutations all gods reach the feet of the supreme Being, Mahadeva.) Sanskrit original* ākāśāt patitaṁ tōyaṁ yathā gacchati sāgaraṁ, sarva dēva namaskāraḥ kēśavaṁ pratigacchati. All the rain water that falls from the sky eventually reaches the Ocean. Similarly, the prayers to any god, ultimately, reaches the Supreme Being (Vishnu). That is, God is One, God has many names. God is One, God has many forms. God can be worshipped by any name, whether it is Keshav or Ishwara; It can be worshipped in any form - be it a four-armed, holding a conch, a mace, a lotus, a saligram; a trident and damaru holding chandrachuda, jatajuta, Gangadhar, or a linga. Ēkaṁ Sat, Viprā Bahudhā vadanti (r̥gvēda, maṇḍala 1, sūkta 164, mantra 46.) That is, the truth is one though the wise call it by many names. This is a clear declaration of Sanatana Dharma. This is the origin of the traditions of the Sun worshiping, the Shakti worshipping, the Shiva worshipping, the Vishnu worshipping, or the Ganapathi worshipping, etc. The purpose of all is one, the methods are many. The purpose is liberation from the cycle of birth-life-death; the methods of achieving it are many. There are many Saguna-Sakara deities who help one to attain the qualification-less,formless Supreme Truth.This simple verse, religious and democratic in principle, which includes the knowledge of Vedanta, respects diversity, and suitable metaphor, Isn't this a symbol of Indianness? Yours, Viśvēśvara Dīkṣita * Sources: 1. Suktisudha, Compiled by R.S. Paliwal 2. Subhashitapadyaratnakara, Muniraja Vishalavijaya 3. Mahasubhashita Sangraha, vol.4, Ludwik Sternbach -------------------------------- ಶಿವ, ವಿಷ್ಣು, ಗಣೇಶ, ಪಾರ್ವತಿ, ಲಕ್ಷ್ಮಿ‌ ಹೀಗೆ ನೂರೆಂಟು ದೇವರುಗಳು ಇದ್ದಾರಲ್ಲ, ಯಾರನ್ನು ಪೂಜಿಸಲಿ? ಕಂನುಡಿ ಆಕಾಶಾತ್ ಪತಿತಂ : ಬಾನಿಂದ ಬಿದ್ದ ಬಾನಿಂದ ಬಿದ್ದ ನೀರೆಲ್ಲ ಹರಿಯುವಂತೆ ಕಡಲಿನ ಕಡೆಗೆ, ಯಾ ದೇವಗೂ ಇತ್ತ ನಮನ ಮಾದೇವನಡಿಗಳಿಗೆ ಮುಡಿಪು. ಸಂಸ್ಕೃತ ಮೂಲ * ಆಕಾಶಾತ್‌ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ, ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ. ಆಕಾಶದಿಂದ ಬೀಳುವ ಎಲ್ಲ ಮಳೆ ನೀರು, ಕೊನೆಯಲ್ಲಿ ಸಮುದ್ರವನ್ನು ಸೇರುತ್ತದೆ. ಹಾಗೆಯೆ, ಯಾವ ದೇವರಿಗೆ ಮಾಡಿದ ಪೂಜೆ ಕೂಡ, ಕೊನೆಯಲ್ಲಿ, ಆ ಪರಮಾತ್ಮನಿಗೆ (ವಿಷ್ಣುವಿಗೆ) ಸಲ್ಲುತ್ತದೆ. ಅಂದರೆ, ದೇವ ಒಬ್ಬ ನಾಮ ಹಲವು. ದೇವ ಒಬ್ಬ ರೂಪ ಹಲವು. ದೇವರನ್ನು ಯಾವುದೇ ಹೆಸರಿನಲ್ಲಿ, ಕೇಶವ ಆಗಲೀ, ಈಶ್ವರ ಆಗಲೀ - ಭಜಿಸಬಹುದು; ಯಾವುದೇ ರೂಪದಲ್ಲಿ - ಶಂಖ ಚಕ್ರ ಗದಾ ಪದ್ಮಗಳನ್ನು ಹಿಡಿದ ಚತುರ್ಭುಜ‌ನಾಗಲಿ, ಸಾಲಿಗ್ರಾಮವೆ ಆಗಲಿ; ಡಮರು ತ್ರಿಶೂಲಗಳನ್ನು ಹಿಡಿದ ಭಸ್ಮ ಬಳಿದುಕೊಂಡ, ಜಟಾಜೂಟ, ಗಂಗಾಧರ ಚಂದ್ರಚೂಡನಾಗಲಿ, ಅಥವಾ ಲಿಂಗ ರೂಪವೆ ಆಗಲಿ - ಭಜಿಸಬಹುದು. ಏಕಂ ಸತ್‌, ವಿಪ್ರಾ ಬಹುಧಾ ವದಂತಿ (ಋಗ್ವೇದ, ಮಂಡಲ ೧, ಸೂಕ್ತ ೧೬೪, ಮಂತ್ರ ೪೬.) ಅಂದರೆ ಸತ್ಯ ಒಂದೇ, ತಿಳಿದವರು ಹಲವು ಹೆಸರುಗಳಿಂದ ಕರೆಯುತ್ತಾರೆ. ಇದು ಸನಾತನ ಧರ್ಮದ ಸ್ಪಷ್ಟ ಘೋಷಣೆ. ಸೂರ್ಯನನ್ನು ಪೂಜಿಸುವ ಸೌರ, ದೇವಿಯನ್ನು ಅರಾಧಿಸುವ ಶಾಕ್ತ, ಶಿವನನ್ನು ಭಜಿಸುವ ಶೈವ, ವಿಷ್ಣುವನ್ನು ಅರ್ಚಿಸುವ ವೈಷ್ಣವ, ಗಣಪತಿಯನ್ನು ಗೌರವಿಸುವ ಗಾಣಪತ್ಯ ಇತ್ಯಾದಿ ಸಂಪ್ರದಾಯಗಳ ಮೂಲ ಇದೇ. ಎಲ್ಲವುಗಳ ಉದ್ದೇಶ ಒಂದು, ವಿಧಾನಗಳು ಹಲವು. ಹುಟ್ಟು-ಬದುಕು-ಸಾವುಗಳ ಚಕ್ರದಿಂದ ಬಿಡುಗಡೆಯೆ ಉದ್ದೇಶ; ಅದನ್ನು ಸಾಧಿಸುವ ವಿಧಾನಗಳು ಹಲವು. ನಿರ್ಗುಣ ನಿರಾಕಾರ ಪರಮ ಸತ್ಯವನ್ನು ಸೇರಲು ಸಹಕಾರಿಯಾಗುವ ಸಗುಣ ಸಾಕಾರ ದೇವತೆಗಳು ಹಲವು.ಹೀಗೆ, ವೇದಾಂತದ ತಿಳಿವನ್ನು ಒಳಗೊಂಡ, ವೈವಿಧ್ಯತೆಯನ್ನು ಗೌರವಿಸುವ, ಸೂಕ್ತ ಉಪಮೆಯ ಈ ಸರಳ ಧಾರ್ಮಿಕ ಡೆಮೊಕ್ರಾಟಿಕ್‌ ತತ್ವದ ಶ್ಲೋಕ ಭಾರತೀಯತೆಯ ಪ್ರತೀಕ ಅಲ್ಲವೆ? ನಿಮ್ಮವನೆ ಆದ ವಿಶ್ವೇಶ್ವರ ದೀಕ್ಷಿತ. * ಆಕರಗಳು: ೧. ಸೂಕ್ತಿಸುಧಾ, ಸಂ| ಆರ್.ಎಸ್.‌ ಪಾಲಿವಾಲ ೨. ಸುಭಾಷಿತಪದ್ಯರತ್ನಾಕರ, ಮುನಿರಾಜ ವಿಶಾಲವಿಜಯ ೩. ಮಹಾಸುಭಾಷಿತ ಸಂಗ್ರಹ, ಸಂಪುಟ ೪, ಲುಡ್ವಿಕ್ ಸ್ಟರ್ನ್‌ಬಾಕ್‌ ಕನ್ನಡಕಲಿ ಬಿತ್ತರಿಕೆ ಜೂನ್ ೧, ೨೦೨೫ ಆಕಾಶಾತ್‌ ಪತಿತಂ - ಬಾನಿಂದ ಬಿದ್ದ ವಿಶ್ವೇಶ್ವರ ದೀಕ್ಷಿತ‌ ಸಂಪರ್ಕ: ನಮೋವಿಶ್ ಯ್ಯಾಟ್ ಯಾಹೂ ಡಾಟ್ ಕಾಮ್
more
ಈತ ಸತ್ಯನಾರಾಯಣ! This is Satyanarayana! By Dr. Srinivasa Havanur
2025/05/05
👍 Like it? ...... ⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠Subscribe to our newsletter [ಈ ಮಹತ್ವದ ಸಂಶೋಧನ ಲೇಖನವನ್ನು ಡಾ. ಶ್ರೀನಿವಾಸ ಹಾವನೂರರು ನನಗೆ ಹಲವಾರು ವರ್ಷಗಳ ಹಿಂದೆಯೆ ಕಳಿಸಿದ್ದರು. ಅಂದು ನಾನು ಹೊರತರುತ್ತಿದ್ದ "ಕನ್ನಡ ಕಲಿ" ಮ್ಯಗ್‌ಝೀನ್‌ನಲ್ಲಿ ಕಾರಣಾಂತರಗಳಿಂದ ಪ್ರಕಟಿಸಲಾಗಲಿಲ್ಲ. ಕಡತದಲ್ಲಿ, ಹುದುಗಿ ಹೋಗಿದ್ದ ಈ ಲೇಖನ ಮತ್ತೆ ಕೈಗೆ ಸಿಕ್ಕಿದೆ. ಸತ್ಯನಾರಾಯಣ ಅಂದರೆ ಯಾರು? ಉಳಿದ ನಾರಾಯಣರೆಲ್ಲ ಸುಳ್ಳು ದೇವರುಗಳೆ? ಈತ ವೇದ ಪುರಾಣಗಳಲ್ಲಿ ಇಲ್ಲ! ಹಾಗಾದರೆ ಈತ ಹುಟ್ಟಿಕೊಂಡದ್ದು ಹೇಗೆ? ಯಾವಾಗ? ನಿಜವೋ ಮೂಢ ನಂಬಿಕೆಯೋ, ಒಳ್ಳಯದೋ ಕೆಟ್ಟದ್ದೋ? ಈತ ವಿಷ್ಣುವೆ? ಕೋಟಿ ದೇವ-ದೇವತೆಗಳಲ್ಲಿ ಈತನ ಸ್ಥಾನ ಯಾವುದು? ಈತನ ಜನಪ್ರಿಯತೆಯ ಗುಟ್ಟೇನು? ಹೀಗೆ, ಹಾವನೂರರು ಈ ಲೇಖನದಲ್ಲಿ ಸತ್ಯನಾರಾಯಣನ ಸತ್ಯಾಸತ್ಯತೆಯನ್ನೆ ಕೆದಕಿ ನೋಡಿದ್ದಾರೆ. ಎಲ್ಲಿಯ ವರೆಗೆ ಸತ್ಯನಾರಾಯಣನ ಪೂಜೆ ನಡೆಯುತ್ತದೋ ಅಲ್ಲಿಯ ವರೆಗೆ ಈ ಲೇಖನ ಪ್ರಸ್ತುತವೆ. ಹಾಗಾಗಿ, ಇದನ್ನು ಸಂಕೋಚವಿಲ್ಲದೆ ಇಂದು ನಿಮ್ಮ ಮುಂದೆ ಇಡುತ್ತಿದ್ದೇನೆ. - ವಿಶ್ವೇಶ್ವರ ದೀಕ್ಷಿತ ]ಪೂರ್ತಿ ಲೇಖನವನ್ನು ಇಲ್ಲಿ ಓದಿ: https://kannadakali.com/article/culture/satyanarayana.html 0:00 ಆರಂಭ 0:10 ಮುಮ್ಮಾತು 01:50.0 ದೇವ ದೇವತೆಗಳ ಪೈಪೋಟಿ 06:42.5 ದೇವ‌ ಒಬ್ಬ; ನಾಮ ಹಲವು 40:42.5 ಉಪದೇವತೆಗಳಿಗೇ ಉಪಚಾರ 04:39.0 ರೇವಾಖಂಡದ ಅರೆ ಸತ್ಯ 06:04.0 ಸತ್ಯನಾರಾಯಣನ ಹುಟ್ಟು ಎಂದು? 06:34.0 ಪುರಾಣ ಕಾಲವೆ? 59:18.5 ಮಧ್ಯ ಕಾಲೀನವೆ? 04:42.5 ಇತ್ತೀಚೆ, ಎರಡು ಶತಮಾನಗಳ ಹಿಂದೆಯೆ? 10:48.0 ಡಾ| ಡಿ. ಡಿ. ಕೋಸಂಬಿ ಏನು ಹೇಳುತ್ತಾರೆ? 54:42.5 ನಿಜವೋ? ಪ್ರಾಮಾಣಿಕವೋ? 13:29.0 ಸತ್ಯನಾರಾಯಣ ಪ್ರಸಾದ 43:42.5 ಸತ್ಯನಾರಾಯಣ = ವಿಷ್ಣು? 45:42.5 ಪೂಜೆಯ ಸಾರ್ವತ್ರಿಕತೆ 31:42.5 ಪೂಜೆ: ಅಂದು - ಇಂದು
more
ಕಂತು 2: ಭಜ ಗೋವಿಂದಂ (ಮೋಹಮುದ್ಗರ) Bhaja Govindam - ಆದಿ ಶಂಕರ ಮತ್ತು ಶಿಷ್ಯರು
2025/02/26
👍 Like it? ...... ⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠Subscribe to our newsletter⁠ "ಭಜ ಗೋವಿಂದಂ" ಎಂದೇ ಪ್ರಸಿದ್ಧವಾದ, ಆದಿ ಶಂಕರ ರಚಿತ "ಮೋಹಮುದ್ಗರ", ‌ ಮಾಯೆಯ ನೆತ್ತಿಗೆ ನೇರ ಗದಾಪ್ರಹಾರ ಮಾಡಿ ನಮ್ಮ ನಿಜ‌ ಸ್ವರೂಪದತ್ತ ದಾರಿ ತೋರಿಸುವ ಕೃತಿ. ಬಾಳಿನ ಗುರಿ ಏನು? ಗಳಿಕೆಯ ಆಸೆ ಏಕೆ? ಸತ್ಯ ಯಾವುದು, ಮಿಥ್ಯೆ ಯಾವುದು? ಪ್ರಾಪಂಚಿಕ ಹೊರ ತಿಳಿವೋ, ತನ್ನ ಒಳ ತಿಳಿವೋ? ಇವೆಲ್ಲವನ್ನೂ ನೇರವಾಗಿ ಉತ್ತರಿಸುತ್ತ ಶಂಕರರು, ಸಂಸಾರದ ಪೊಳ್ಳುತನ, ಮನುಷ್ಯನ ಡಂಬಾಚಾರ, ವ್ಯರ್ಥ ಹೋರಾಟಗಳನ್ನು ಬಯಲಿಗೆ ಎಳೆಯುತ್ತಾರೆ. ನೈಜವನ್ನು ಕಂಡುಕೊಳ್ಳಲು ಅನುಸರಿಸಬೇಕಾದ ವೇದಾಂತ ತತ್ವಗಳನ್ನು ಇಲ್ಲಿ ಬಿಗಿಯಾಗಿ ಹೆಣೆದಿದ್ದಾರೆ. ಪಲ್ಲವಿ ಎಂದು ಗಣಿಸಲಾದ ಮೊದಲ ನುಡಿ ಮತ್ತು ಮುಂದಿನ ಹನ್ನೆರಡು ನುಡಿಗಳನ್ನು ಸ್ವತಃ ಶಂಕರರು ರಚಿಸಿದ್ದಾರೆ. ಇವನ್ನು "ದ್ವಾದಶ ಮಂಜರಿಕಾ ಸ್ತೋತ್ರ" (ಹನ್ನೆರಡು ಹೂಗಳ ಗೊಂಚಲು) ಎಂದು ಗುರುತಿಸಲಾಗಿದೆ. ಇವುಗಳಿಂದ ಸ್ಫೂರ್ತಿಗೊಂಡ ಅವರ ಹದಿನಾಲ್ಕು ಶಿಷ್ಯರು ಒಂದೊಂದು ನುಡಿಗಳನ್ನು ಸೇರಿಸಿದರು; ಅದೇ ಚತುರ್ದಶ ಮಂಜರಿಕಾ ಸ್ತೋತ್ರ. ಮತ್ತೆ ನಾಲ್ಕು ನುಡಿಗಳನ್ನು ಶಂಕರರು ರಚಿಸಿ ಒಟ್ಟು ೩೧ ನುಡಿಗಳ ಮೋಹ ಮುದ್ಗರವನ್ನು ಪೂರ್ತಿಗೊಳಿಸಿದರು. ಇದರ ಸರಳ ಕನ್ನಡ ಅನುವಾದ ಇಲ್ಲಿದೆ ಪದ್ಯರೂಪದಲ್ಲಿ.ಕಂತು ೧: ನುಡಿ ೧ – ೧೩, ಪಲ್ಲವಿಯೊಡನೆ ಹನ್ನೆರಡು ಹೂಗಳ ಗೊಂಚಲುಕಂತು ೨: ನುಡಿ ೧೪ – ೨೭ಚತುರ್ದಶ ಮಂಜರಿಕಾಕಂತು ೩: ನುಡಿ ೨೮ – ೩೧ಉಪಸಂಹಾರಕನ್ನಡಕ್ಕೆನೆನೆ ಗೋವಿಂದನವಿಶ್ವೇಶ್ವರ ದೀಕ್ಷಿತ ---- ಕೆಲವರು ಕೆಲವು ಪದಗಳ ಅನುವಾದದ ಬಗ್ಗೆ ಕೇಳಿದ್ದೀರಿ. ನನ್ನ ವಿಚಾರ ಹೀಗಿದೆ: ಡುಕೃಂಕರಣೇ:ಸಾಮಾನ್ಯವಾಗಿ ಇದನ್ನು (ಇಡಿಯ) ವ್ಯಾಕರಣ ಎಂದು ತಿಳಿಯಲಾಗಿದೆ. ಭಾಷೆ, ಆಲೋಚನೆಗಳು ಮತ್ತು ಜ್ಞಾನವನ್ನು ಹಿಡಿದಿಡುವ ಮತ್ತು ಸಂವಹಿಸುವ ಸಾಧನವಾದರೆ, ವ್ಯಾಕರಣವು ಹಾಗೆ ಮಾಡಲು ಒಂದು ಚೌಕಟ್ಟು ಮತ್ತು ನಿಯಮಗಳನ್ನು ಒದಗಿಸುತ್ತದೆ. ಆದಾಗ್ಯೂ ನಿಯಮಗಳೇ ನಿಜವಾದ ಜ್ಞಾನವಲ್ಲ. ಜ್ಞಾನ ಸಂವಹನೆಗೆ ಅಗತ್ಯವಿದ್ದರೂ ವ್ಯಾಕರಣವೇ (syntax)ಗುರಿಯಲ್ಲ. ವ್ಯಾಕರಣ (syntax)ಮೇಲ್ಮೈ ಜ್ಞಾನವಾದರೆ, ಅರ್ಥ (symantics)ಆಂತರಿಕ ನೈಜ ಜ್ಞಾನವಾಗಿದೆ. ರೂಪ(form)ವನ್ನೆ ಸ್ವರೂಪ(substance)ಎಂದು ತಿಳಿಯುವುದು ಮೌಢ್ಯ. ಶಂಕರರು, "ಭಜ ಗೋವಿಂದಂ" ರಚನೆಯ ಉದ್ದಕ್ಕೂ, ಆಚರಣೆಗಳು, ಭೌತಿಕತೆ, ನಡವಳಿಕೆಗಳು, ಮತ್ತು ಜೀವನ ನಿಯಮಗಳು ಎಲ್ಲವನ್ನೂ ಮೀರಿ, ಅವುಗಳ ಟೊಳ್ಳುತನವನ್ನು ಕಂಡು, ನಮ್ಮ ನೈಜ ಸ್ವರೂಪವನ್ನು ಅರಿತುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳುತ್ತಾರೆ. ಆ ಭಾವದಲ್ಲಿ, "ಒಳ ತಿಳಿವು" ಆಂತರಿಕ ಮತ್ತು ನಿಜವಾದ ಜ್ಞಾನವಾದರೆ "ಡುಕೃಂಕರಣೆ"ಯನ್ನು "ಹೊರ ತಿಳಿವು" ಎಂದು ಅನುವಾದಿಸಿದ್ದೇನೆ. ಈ ಕೆಲವು ಕೊಂಡಿಗಳು ತಿಳಿದುಕೊಳ್ಳಲು ಸಹಕಾರಿಯಾಗಬಹುದು: ⁠https://nivedita2015.wordpress.com/2015/09/25/grammatical-aspects-in-bhaja-govindam-verse-1/⁠⁠https://www.reddit.com/r/sanskrit/comments/5z3e1m/translating_dukrjkarane_any_hints/⁠ಮೂಢಮತೇ: ಇದಕ್ಕೆ ಕೆಲವರು "ಮಂದಮತಿ" ಅಥವ ಕೇವಲ "ಮನವೇ" ಎನ್ನಬಹುದಲ್ಲ ಎಂದಿದ್ದಾರೆ. ಮೊದಲನೆಯದಾಗಿ, ಇಲ್ಲಿ ಮೂಢ ಎನ್ನುವುದಕ್ಕೆ ಅಜ್ಞ/ತಿಳಿಗೇಡಿ ಎನ್ನುವ ಸಾಮಾನ್ಯ ಅರ್ಥ ಇದೆ. ಭ್ರಮೆಗೊಳಗಾದವ, ಮರುಳ, ಮಂಕು ಹಿಡಿದವ ಎನ್ನುವದು ಇಲ್ಲಿ ಔಚಿತ್ಯಪೂರ್ಣವಾಗಿದೆ. ಅಂದರೆ ಮಾಯೆಯ ಜಾಲದಲ್ಲಿ ಸಿಕ್ಕು, ತನ್ನ ನಿಜ ಸ್ವರೂಪವನ್ನು ಅರಿಯದೆ, ಬೇರೆಯದಕ್ಕೆ ತಾ ಎಂದು ಅಂಟಿಕೊಂಡಿರುವವ ಎನ್ನುವುದು ಶಂಕರರ ತಾತ್ವಿಕ ವಿಚಾರಕ್ಕೆ ಹೊಂದಿಕೆಯಾಗುತ್ತದೆ. "ಮತಿ" ಎಂದರೆ ವಿವೇಚನೆಯ ಶಕ್ತಿ ಉಳ್ಳದ್ದು; ಮನಸ್ಸು ಎನ್ನುವುದಕ್ಕಿಂತ ವಿಶಿಷ್ಟವಾದದ್ದು. ವಿವೇಕ ಚೂಡಾಮಣಿಯ ಕರ್ತೃ ಆದ ಶಂಕರರು ಇದನ್ನು ಉದ್ದೇಶಪೂರ್ವಕ ಉಪಯೋಗಿಸಿದ್ದಾರೆ. ಆದ್ದರಿಂದ ಇದನ್ನು "ಮನ" ಎಂದು ಬದಲಾಯಿಸುವುದು ತಕ್ಕುದಲ್ಲ ಎನಿಸುತ್ತದೆ. ಮೇಲಾಗಿ, ಮೂಲದಲ್ಲಿ ಇರುವ ಮೂಢ ಪದವನ್ನು ಬಿಟ್ಟುಬಿಡುವುದೂ ಸರಿ ಅಲ್ಲ; ಅನುವಾದ ಅಂದರೆ (ಪದಶಃ ಅಲ್ಲದಿದ್ದರೂ) ಮೂಲಕ್ಕೆ ಆದಷ್ಟು ಬದ್ಧವಾಗಿರಬೇಕು.ಎರಡನೆಯದಾಗಿ, ಮಂದ ಎನ್ನುವುದು ಮೂಢ ಪದಕ್ಕೆ ಅನ್ವರ್ಥ ಪದ ಆದರೂ ಬೇರೆ ಅರ್ಥವೂ (slow, dull, dim...) ಬರಬಹುದು, ಅಲ್ಲದೆ, ಒಂದು ಸಂಸ್ಕೃತ ಪದಕ್ಕೆ ಬದಲಾಗಿ (ಕಾರಣ ಇಲ್ಲದೆ) ಇನ್ನೊಂದು ಸಂಸ್ಕೃತ ಪದ ಹಾಕಿದರೆ ಅದಕ್ಕೆ ಕನ್ನಡ ಅನುವಾದ ಏಕೆ ಅನ್ನಬೇಕು? -- ಚತುರ್ದಶ ಮಂಜರಿಕಾ 00:04 ೧ ಭಜ ಗೋವಿಂದಂ ಭಜ ಗೋವಿಂದಂ 00:53 ೨ ಮೂಢ ಜಹೀಹಿ ಧನಾಗಮತೃಷ್ಣಾಂ 01:45 ೩ ನಾರೀಸ್ತನಭರನಾಭೀದೇಶಂ 02:26 ೪ ನಲಿನೀದಲಗತಜಲಮತಿತರಲಂ 03:10 ೫ ಯಾವದ್ವಿತ್ತೋಪಾರ್ಜನಸಕ್ತಃ 03:55 ೬ ಯಾವತ್‌ ಪವನೋ ನಿವಸತಿ ದೇಹೇ 04:40 ೭ ಬಾಲಸ್ತಾವತ್‌ ಕ್ರೀಡಾಸಕ್ತಃ05:25 ೮ ಕಾ ತೇ ಕಾಂತಾ? ಕಸ್ತೇ ಪುತ್ರಃ? 06:10 ೯ ಸತ್ಸಂಗತ್ವೇ ನಿಸ್ಸಂಗತ್ವಂ 06:49 ೧೦ ವಯಸಿ ಗತೇ ಕಃ ಕಾಮವಿಕಾರಃ? 07:29 ೧೧ ಮಾ ಕುರು ಧನ ಜನ ಯೌವನ ಗರ್ವಂ 08:09 ೧೨ ದಿನಯಾಮಿನ್ಯೌ, ಸಾಯಂ ಪ್ರಾತಃ 08:54 ೧೩ ಕಾ ತೇ ಕಾಂತಾ ಧನಗತಚಿಂತಾ? 09:40 ಕೃತಜ್ಞತೆ, ಸಂಪರ್ಕ
more
ಕಂತು ೩: ಭಜ ಗೋವಿಂದಂ (ಮೋಹಮುದ್ಗರ) Bhaja Govindam - ಆದಿ ಶಂಕರ ಮತ್ತು ಶಿಷ್ಯರು
2025/02/26
👍 Like it? ...... ⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠Subscribe to our newsletter⁠ "ಭಜ ಗೋವಿಂದಂ" ಎಂದೇ ಪ್ರಸಿದ್ಧವಾದ, ಆದಿ ಶಂಕರ ರಚಿತ "ಮೋಹಮುದ್ಗರ", ‌ ಮಾಯೆಯ ನೆತ್ತಿಗೆ ನೇರ ಗದಾಪ್ರಹಾರ ಮಾಡಿ ನಮ್ಮ ನಿಜ‌ ಸ್ವರೂಪದತ್ತ ದಾರಿ ತೋರಿಸುವ ಕೃತಿ. ಬಾಳಿನ ಗುರಿ ಏನು? ಗಳಿಕೆಯ ಆಸೆ ಏಕೆ? ಸತ್ಯ ಯಾವುದು, ಮಿಥ್ಯೆ ಯಾವುದು? ಪ್ರಾಪಂಚಿಕ ಹೊರ ತಿಳಿವೋ, ತನ್ನ ಒಳ ತಿಳಿವೋ? ಇವೆಲ್ಲವನ್ನೂ ನೇರವಾಗಿ ಉತ್ತರಿಸುತ್ತ ಶಂಕರರು, ಸಂಸಾರದ ಪೊಳ್ಳುತನ, ಮನುಷ್ಯನ ಡಂಬಾಚಾರ, ವ್ಯರ್ಥ ಹೋರಾಟಗಳನ್ನು ಬಯಲಿಗೆ ಎಳೆಯುತ್ತಾರೆ. ನೈಜವನ್ನು ಕಂಡುಕೊಳ್ಳಲು ಅನುಸರಿಸಬೇಕಾದ ವೇದಾಂತ ತತ್ವಗಳನ್ನು ಇಲ್ಲಿ ಬಿಗಿಯಾಗಿ ಹೆಣೆದಿದ್ದಾರೆ. ಪಲ್ಲವಿ ಎಂದು ಗಣಿಸಲಾದ ಮೊದಲ ನುಡಿ ಮತ್ತು ಮುಂದಿನ ಹನ್ನೆರಡು ನುಡಿಗಳನ್ನು ಸ್ವತಃ ಶಂಕರರು ರಚಿಸಿದ್ದಾರೆ. ಇವನ್ನು "ದ್ವಾದಶ ಮಂಜರಿಕಾ ಸ್ತೋತ್ರ" (ಹನ್ನೆರಡು ಹೂಗಳ ಗೊಂಚಲು) ಎಂದು ಗುರುತಿಸಲಾಗಿದೆ. ಇವುಗಳಿಂದ ಸ್ಫೂರ್ತಿಗೊಂಡ ಅವರ ಹದಿನಾಲ್ಕು ಶಿಷ್ಯರು ಒಂದೊಂದು ನುಡಿಗಳನ್ನು ಸೇರಿಸಿದರು; ಅದೇ ಚತುರ್ದಶ ಮಂಜರಿಕಾ ಸ್ತೋತ್ರ. ಮತ್ತೆ ನಾಲ್ಕು ನುಡಿಗಳನ್ನು ಶಂಕರರು ರಚಿಸಿ ಒಟ್ಟು ೩೧ ನುಡಿಗಳ ಮೋಹ ಮುದ್ಗರವನ್ನು ಪೂರ್ತಿಗೊಳಿಸಿದರು. ಇದರ ಸರಳ ಕನ್ನಡ ಅನುವಾದ ಇಲ್ಲಿದೆ ಪದ್ಯರೂಪದಲ್ಲಿ. ಕಂತು ೧: ನುಡಿ ೧ – ೧೩, ಪಲ್ಲವಿಯೊಡನೆ ಹನ್ನೆರಡು ಹೂಗಳ ಗೊಂಚಲು ಕಂತು ೨: ನುಡಿ ೧೪ – ೨೭ಚತುರ್ದಶ ಮಂಜರಿಕಾಕಂತು ೩: ನುಡಿ ೨೮ – ೩೧ ಕಂತು ೩ ಉಪಸಂಹಾರ ಕನ್ನಡಕ್ಕೆ: ನೆನೆ ಗೋವಿಂದನ, ವಿಶ್ವೇಶ್ವರ ದೀಕ್ಷಿತ ---- ಕೆಲವರು ಕೆಲವು ಪದಗಳ ಅನುವಾದದ ಬಗ್ಗೆ ಕೇಳಿದ್ದೀರಿ. ನನ್ನ ವಿಚಾರ ಹೀಗಿದೆ: ಡುಕೃಂಕರಣೇ:ಸಾಮಾನ್ಯವಾಗಿ ಇದನ್ನು (ಇಡಿಯ) ವ್ಯಾಕರಣ ಎಂದು ತಿಳಿಯಲಾಗಿದೆ. ಭಾಷೆ, ಆಲೋಚನೆಗಳು ಮತ್ತು ಜ್ಞಾನವನ್ನು ಹಿಡಿದಿಡುವ ಮತ್ತು ಸಂವಹಿಸುವ ಸಾಧನವಾದರೆ, ವ್ಯಾಕರಣವು ಹಾಗೆ ಮಾಡಲು ಒಂದು ಚೌಕಟ್ಟು ಮತ್ತು ನಿಯಮಗಳನ್ನು ಒದಗಿಸುತ್ತದೆ. ಆದಾಗ್ಯೂ ನಿಯಮಗಳೇ ನಿಜವಾದ ಜ್ಞಾನವಲ್ಲ. ಜ್ಞಾನ ಸಂವಹನೆಗೆ ಅಗತ್ಯವಿದ್ದರೂ ವ್ಯಾಕರಣವೇ (syntax)ಗುರಿಯಲ್ಲ. ವ್ಯಾಕರಣ (syntax)ಮೇಲ್ಮೈ ಜ್ಞಾನವಾದರೆ, ಅರ್ಥ (symantics)ಆಂತರಿಕ ನೈಜ ಜ್ಞಾನವಾಗಿದೆ. ರೂಪ(form)ವನ್ನೆ ಸ್ವರೂಪ(substance)ಎಂದು ತಿಳಿಯುವುದು ಮೌಢ್ಯ. ಶಂಕರರು, "ಭಜ ಗೋವಿಂದಂ" ರಚನೆಯ ಉದ್ದಕ್ಕೂ, ಆಚರಣೆಗಳು, ಭೌತಿಕತೆ, ನಡವಳಿಕೆಗಳು, ಮತ್ತು ಜೀವನ ನಿಯಮಗಳು ಎಲ್ಲವನ್ನೂ ಮೀರಿ, ಅವುಗಳ ಟೊಳ್ಳುತನವನ್ನು ಕಂಡು, ನಮ್ಮ ನೈಜ ಸ್ವರೂಪವನ್ನು ಅರಿತುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳುತ್ತಾರೆ. ಆ ಭಾವದಲ್ಲಿ, "ಒಳ ತಿಳಿವು" ಆಂತರಿಕ ಮತ್ತು ನಿಜವಾದ ಜ್ಞಾನವಾದರೆ "ಡುಕೃಂಕರಣೆ"ಯನ್ನು "ಹೊರ ತಿಳಿವು" ಎಂದು ಅನುವಾದಿಸಿದ್ದೇನೆ. ಈ ಕೆಲವು ಕೊಂಡಿಗಳು ತಿಳಿದುಕೊಳ್ಳಲು ಸಹಕಾರಿಯಾಗಬಹುದು: ⁠https://nivedita2015.wordpress.com/2015/09/25/grammatical-aspects-in-bhaja-govindam-verse-1/⁠⁠https://www.reddit.com/r/sanskrit/comments/5z3e1m/translating_dukrjkarane_any_hints/⁠ಮೂಢಮತೇ: ಇದಕ್ಕೆ ಕೆಲವರು "ಮಂದಮತಿ" ಅಥವ ಕೇವಲ "ಮನವೇ" ಎನ್ನಬಹುದಲ್ಲ ಎಂದಿದ್ದಾರೆ. ಮೊದಲನೆಯದಾಗಿ, ಇಲ್ಲಿ ಮೂಢ ಎನ್ನುವುದಕ್ಕೆ ಅಜ್ಞ/ತಿಳಿಗೇಡಿ ಎನ್ನುವ ಸಾಮಾನ್ಯ ಅರ್ಥ ಇದೆ. ಭ್ರಮೆಗೊಳಗಾದವ, ಮರುಳ, ಮಂಕು ಹಿಡಿದವ ಎನ್ನುವದು ಇಲ್ಲಿ ಔಚಿತ್ಯಪೂರ್ಣವಾಗಿದೆ. ಅಂದರೆ ಮಾಯೆಯ ಜಾಲದಲ್ಲಿ ಸಿಕ್ಕು, ತನ್ನ ನಿಜ ಸ್ವರೂಪವನ್ನು ಅರಿಯದೆ, ಬೇರೆಯದಕ್ಕೆ ತಾ ಎಂದು ಅಂಟಿಕೊಂಡಿರುವವ ಎನ್ನುವುದು ಶಂಕರರ ತಾತ್ವಿಕ ವಿಚಾರಕ್ಕೆ ಹೊಂದಿಕೆಯಾಗುತ್ತದೆ. "ಮತಿ" ಎಂದರೆ ವಿವೇಚನೆಯ ಶಕ್ತಿ ಉಳ್ಳದ್ದು; ಮನಸ್ಸು ಎನ್ನುವುದಕ್ಕಿಂತ ವಿಶಿಷ್ಟವಾದದ್ದು. ವಿವೇಕ ಚೂಡಾಮಣಿಯ ಕರ್ತೃ ಆದ ಶಂಕರರು ಇದನ್ನು ಉದ್ದೇಶಪೂರ್ವಕ ಉಪಯೋಗಿಸಿದ್ದಾರೆ. ಆದ್ದರಿಂದ ಇದನ್ನು "ಮನ" ಎಂದು ಬದಲಾಯಿಸುವುದು ತಕ್ಕುದಲ್ಲ ಎನಿಸುತ್ತದೆ. ಮೇಲಾಗಿ, ಮೂಲದಲ್ಲಿ ಇರುವ ಮೂಢ ಪದವನ್ನು ಬಿಟ್ಟುಬಿಡುವುದೂ ಸರಿ ಅಲ್ಲ; ಅನುವಾದ ಅಂದರೆ (ಪದಶಃ ಅಲ್ಲದಿದ್ದರೂ) ಮೂಲಕ್ಕೆ ಆದಷ್ಟು ಬದ್ಧವಾಗಿರಬೇಕು.ಎರಡನೆಯದಾಗಿ, ಮಂದ ಎನ್ನುವುದು ಮೂಢ ಪದಕ್ಕೆ ಅನ್ವರ್ಥ ಪದ ಆದರೂ ಬೇರೆ ಅರ್ಥವೂ (slow, dull, dim...) ಬರಬಹುದು, ಅಲ್ಲದೆ, ಒಂದು ಸಂಸ್ಕೃತ ಪದಕ್ಕೆ ಬದಲಾಗಿ (ಕಾರಣ ಇಲ್ಲದೆ) ಇನ್ನೊಂದು ಸಂಸ್ಕೃತ ಪದ ಹಾಕಿದರೆ ಅದಕ್ಕೆ ಕನ್ನಡ ಅನುವಾದ ಏಕೆ ಅನ್ನಬೇಕು? -- ಉಪಸಂಹಾರ 00:04 ೧ ಭಜ ಗೋವಿಂದಂ ಭಜ ಗೋವಿಂದಂ 00:53 ೨ ಮೂಢ ಜಹೀಹಿ ಧನಾಗಮತೃಷ್ಣಾಂ 01:45 ೩ ನಾರೀಸ್ತನಭರನಾಭೀದೇಶಂ 02:26 ೪ ನಲಿನೀದಲಗತಜಲಮತಿತರಲಂ 03:10 ೫ ಯಾವದ್ವಿತ್ತೋಪಾರ್ಜನಸಕ್ತಃ 03:55 ೬ ಯಾವತ್‌ ಪವನೋ ನಿವಸತಿ ದೇಹೇ 04:40 ೭ ಬಾಲಸ್ತಾವತ್‌ ಕ್ರೀಡಾಸಕ್ತಃ05:25 ೮ ಕಾ ತೇ ಕಾಂತಾ? ಕಸ್ತೇ ಪುತ್ರಃ? 06:10 ೯ ಸತ್ಸಂಗತ್ವೇ ನಿಸ್ಸಂಗತ್ವಂ 06:49 ೧೦ ವಯಸಿ ಗತೇ ಕಃ ಕಾಮವಿಕಾರಃ? 07:29 ೧೧ ಮಾ ಕುರು ಧನ ಜನ ಯೌವನ ಗರ್ವಂ 08:09 ೧೨ ದಿನಯಾಮಿನ್ಯೌ, ಸಾಯಂ ಪ್ರಾತಃ 08:54 ೧೩ ಕಾ ತೇ ಕಾಂತಾ ಧನಗತಚಿಂತಾ? 09:40 ಕೃತಜ್ಞತೆ, ಸಂಪರ್ಕ
more
ಕಂತು ೧: ಭಜ ಗೋವಿಂದಂ (ಮೋಹಮುದ್ಗರ) Bhaja Govindam - ಆದಿ ಶಂಕರ ಮತ್ತು ಶಿಷ್ಯರು
2025/02/10
👍 Like it? ...... ⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠Subscribe to our newsletter "ಭಜ ಗೋವಿಂದಂ" ಎಂದೇ ಪ್ರಸಿದ್ಧವಾದ, ಆದಿ ಶಂಕರ ರಚಿತ "ಮೋಹಮುದ್ಗರ", ‌ ಮಾಯೆಯ ನೆತ್ತಿಗೆ ನೇರ ಗದಾಪ್ರಹಾರ ಮಾಡಿ ನಮ್ಮ ನಿಜ‌ ಸ್ವರೂಪದತ್ತ ದಾರಿ ತೋರಿಸುವ ಕೃತಿ. ಬಾಳಿನ ಗುರಿ ಏನು? ಗಳಿಕೆಯ ಆಸೆ ಏಕೆ? ಸತ್ಯ ಯಾವುದು, ಮಿಥ್ಯೆ ಯಾವುದು? ಪ್ರಾಪಂಚಿಕ ಹೊರ ತಿಳಿವೋ, ತನ್ನ ಒಳ ತಿಳಿವೋ? ಇವೆಲ್ಲವನ್ನೂ ನೇರವಾಗಿ ಉತ್ತರಿಸುತ್ತ ಶಂಕರರು, ಸಂಸಾರದ ಪೊಳ್ಳುತನ, ಮನುಷ್ಯನ ಡಂಬಾಚಾರ, ವ್ಯರ್ಥ ಹೋರಾಟಗಳನ್ನು ಬಯಲಿಗೆ ಎಳೆಯುತ್ತಾರೆ. ನೈಜವನ್ನು ಕಂಡುಕೊಳ್ಳಲು ಅನುಸರಿಸಬೇಕಾದ ವೇದಾಂತ ತತ್ವಗಳನ್ನು ಇಲ್ಲಿ ಬಿಗಿಯಾಗಿ ಹೆಣೆದಿದ್ದಾರೆ. ಪಲ್ಲವಿ ಎಂದು ಗಣಿಸಲಾದ ಮೊದಲ ನುಡಿ ಮತ್ತು ಮುಂದಿನ ಹನ್ನೆರಡು ನುಡಿಗಳನ್ನು ಸ್ವತಃ ಶಂಕರರು ರಚಿಸಿದ್ದಾರೆ. ಇವನ್ನು "ದ್ವಾದಶ ಮಂಜರಿಕಾ ಸ್ತೋತ್ರ" (ಹನ್ನೆರಡು ಹೂಗಳ ಗೊಂಚಲು) ಎಂದು ಗುರುತಿಸಲಾಗಿದೆ. ಇವುಗಳಿಂದ ಸ್ಫೂರ್ತಿಗೊಂಡ ಅವರ ಹದಿನಾಲ್ಕು ಶಿಷ್ಯರು ಒಂದೊಂದು ನುಡಿಗಳನ್ನು ಸೇರಿಸಿದರು; ಅದೇ ಚತುರ್ದಶ ಮಂಜರಿಕಾ ಸ್ತೋತ್ರ. ಮತ್ತೆ ನಾಲ್ಕು ನುಡಿಗಳನ್ನು ಶಂಕರರು ರಚಿಸಿ ಒಟ್ಟು ೩೧ ನುಡಿಗಳ ಮೋಹ ಮುದ್ಗರವನ್ನು ಪೂರ್ತಿಗೊಳಿಸಿದರು.ಇದರ ಸರಳ ಕನ್ನಡ ಅನುವಾದ ಇಲ್ಲಿದೆ ಪದ್ಯರೂಪದಲ್ಲಿ.ಕಂತು ೧: ನುಡಿ ೧ – ೧೩, ಪಲ್ಲವಿಯೊಡನೆ ಹನ್ನೆರಡು ಹೂಗಳ ಗೊಂಚಲುಕಂತು ೨: ನುಡಿ ೧೪ – ೨೭ಚತುರ್ದಶ ಮಂಜರಿಕಾಕಂತು ೩: ನುಡಿ ೨೮ – ೩೧ಉಪಸಂಹಾರಕನ್ನಡಕ್ಕೆನೆನೆ ಗೋವಿಂದನವಿಶ್ವೇಶ್ವರ ದೀಕ್ಷಿತ ---- ಕೆಲವರು ಕೆಲವು ಪದಗಳ ಅನುವಾದದ ಬಗ್ಗೆ ಕೇಳಿದ್ದೀರಿ. ನನ್ನ ವಿಚಾರ ಹೀಗಿದೆ: ಡುಕೃಂಕರಣೇ:ಸಾಮಾನ್ಯವಾಗಿ ಇದನ್ನು (ಇಡಿಯ) ವ್ಯಾಕರಣ ಎಂದು ತಿಳಿಯಲಾಗಿದೆ. ಭಾಷೆ, ಆಲೋಚನೆಗಳು ಮತ್ತು ಜ್ಞಾನವನ್ನು ಹಿಡಿದಿಡುವ ಮತ್ತು ಸಂವಹಿಸುವ ಸಾಧನವಾದರೆ, ವ್ಯಾಕರಣವು ಹಾಗೆ ಮಾಡಲು ಒಂದು ಚೌಕಟ್ಟು ಮತ್ತು ನಿಯಮಗಳನ್ನು ಒದಗಿಸುತ್ತದೆ. ಆದಾಗ್ಯೂ ನಿಯಮಗಳೇ ನಿಜವಾದ ಜ್ಞಾನವಲ್ಲ. ಜ್ಞಾನ ಸಂವಹನೆಗೆ ಅಗತ್ಯವಿದ್ದರೂ ವ್ಯಾಕರಣವೇ (syntax)ಗುರಿಯಲ್ಲ. ವ್ಯಾಕರಣ (syntax)ಮೇಲ್ಮೈ ಜ್ಞಾನವಾದರೆ, ಅರ್ಥ (symantics)ಆಂತರಿಕ ನೈಜ ಜ್ಞಾನವಾಗಿದೆ. ರೂಪ(form)ವನ್ನೆ ಸ್ವರೂಪ(substance)ಎಂದು ತಿಳಿಯುವುದು ಮೌಢ್ಯ. ಶಂಕರರು, "ಭಜ ಗೋವಿಂದಂ" ರಚನೆಯ ಉದ್ದಕ್ಕೂ, ಆಚರಣೆಗಳು, ಭೌತಿಕತೆ, ನಡವಳಿಕೆಗಳು, ಮತ್ತು ಜೀವನ ನಿಯಮಗಳು ಎಲ್ಲವನ್ನೂ ಮೀರಿ, ಅವುಗಳ ಟೊಳ್ಳುತನವನ್ನು ಕಂಡು, ನಮ್ಮ ನೈಜ ಸ್ವರೂಪವನ್ನು ಅರಿತುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳುತ್ತಾರೆ. ಆ ಭಾವದಲ್ಲಿ, "ಒಳ ತಿಳಿವು" ಆಂತರಿಕ ಮತ್ತು ನಿಜವಾದ ಜ್ಞಾನವಾದರೆ "ಡುಕೃಂಕರಣೆ"ಯನ್ನು "ಹೊರ ತಿಳಿವು" ಎಂದು ಅನುವಾದಿಸಿದ್ದೇನೆ. ಈ ಕೆಲವು ಕೊಂಡಿಗಳು ತಿಳಿದುಕೊಳ್ಳಲು ಸಹಕಾರಿಯಾಗಬಹುದು: https://nivedita2015.wordpress.com/2015/09/25/grammatical-aspects-in-bhaja-govindam-verse-1/https://www.reddit.com/r/sanskrit/comments/5z3e1m/translating_dukrjkarane_any_hints/ಮೂಢಮತೇ: ಇದಕ್ಕೆ ಕೆಲವರು "ಮಂದಮತಿ" ಅಥವ ಕೇವಲ "ಮನವೇ" ಎನ್ನಬಹುದಲ್ಲ ಎಂದಿದ್ದಾರೆ. ಮೊದಲನೆಯದಾಗಿ, ಇಲ್ಲಿ ಮೂಢ ಎನ್ನುವುದಕ್ಕೆ ಅಜ್ಞ/ತಿಳಿಗೇಡಿ ಎನ್ನುವ ಸಾಮಾನ್ಯ ಅರ್ಥ ಇದೆ. ಭ್ರಮೆಗೊಳಗಾದವ, ಮರುಳ, ಮಂಕು ಹಿಡಿದವ ಎನ್ನುವದು ಇಲ್ಲಿ ಔಚಿತ್ಯಪೂರ್ಣವಾಗಿದೆ. ಅಂದರೆ ಮಾಯೆಯ ಜಾಲದಲ್ಲಿ ಸಿಕ್ಕು, ತನ್ನ ನಿಜ ಸ್ವರೂಪವನ್ನು ಅರಿಯದೆ, ಬೇರೆಯದಕ್ಕೆ ತಾ ಎಂದು ಅಂಟಿಕೊಂಡಿರುವವ ಎನ್ನುವುದು ಶಂಕರರ ತಾತ್ವಿಕ ವಿಚಾರಕ್ಕೆ ಹೊಂದಿಕೆಯಾಗುತ್ತದೆ. "ಮತಿ" ಎಂದರೆ ವಿವೇಚನೆಯ ಶಕ್ತಿ ಉಳ್ಳದ್ದು; ಮನಸ್ಸು ಎನ್ನುವುದಕ್ಕಿಂತ ವಿಶಿಷ್ಟವಾದದ್ದು. ವಿವೇಕ ಚೂಡಾಮಣಿಯ ಕರ್ತೃ ಆದ ಶಂಕರರು ಇದನ್ನು ಉದ್ದೇಶಪೂರ್ವಕ ಉಪಯೋಗಿಸಿದ್ದಾರೆ. ಆದ್ದರಿಂದ ಇದನ್ನು "ಮನ" ಎಂದು ಬದಲಾಯಿಸುವುದು ತಕ್ಕುದಲ್ಲ ಎನಿಸುತ್ತದೆ. ಮೇಲಾಗಿ, ಮೂಲದಲ್ಲಿ ಇರುವ ಮೂಢ ಪದವನ್ನು ಬಿಟ್ಟುಬಿಡುವುದೂ ಸರಿ ಅಲ್ಲ; ಅನುವಾದ ಅಂದರೆ (ಪದಶಃ ಅಲ್ಲದಿದ್ದರೂ) ಮೂಲಕ್ಕೆ ಆದಷ್ಟು ಬದ್ಧವಾಗಿರಬೇಕು.ಎರಡನೆಯದಾಗಿ, ಮಂದ ಎನ್ನುವುದು ಮೂಢ ಪದಕ್ಕೆ ಅನ್ವರ್ಥ ಪದ ಆದರೂ ಬೇರೆ ಅರ್ಥವೂ (slow, dull, dim...) ಬರಬಹುದು, ಅಲ್ಲದೆ, ಒಂದು ಸಂಸ್ಕೃತ ಪದಕ್ಕೆ ಬದಲಾಗಿ (ಕಾರಣ ಇಲ್ಲದೆ) ಇನ್ನೊಂದು ಸಂಸ್ಕೃತ ಪದ ಹಾಕಿದರೆ ಅದಕ್ಕೆ ಕನ್ನಡ ಅನುವಾದ ಏಕೆ ಅನ್ನಬೇಕು? -- ದ್ವಾದಶ ಮಂಜರಿಕಾ 00:04 ೧ ಭಜ ಗೋವಿಂದಂ ಭಜ ಗೋವಿಂದಂ 00:53 ೨ ಮೂಢ ಜಹೀಹಿ ಧನಾಗಮತೃಷ್ಣಾಂ 01:45 ೩ ನಾರೀಸ್ತನಭರನಾಭೀದೇಶಂ 02:26 ೪ ನಲಿನೀದಲಗತಜಲಮತಿತರಲಂ 03:10 ೫ ಯಾವದ್ವಿತ್ತೋಪಾರ್ಜನಸಕ್ತಃ 03:55 ೬ ಯಾವತ್‌ ಪವನೋ ನಿವಸತಿ ದೇಹೇ 04:40 ೭ ಬಾಲಸ್ತಾವತ್‌ ಕ್ರೀಡಾಸಕ್ತಃ05:25 ೮ ಕಾ ತೇ ಕಾಂತಾ? ಕಸ್ತೇ ಪುತ್ರಃ? 06:10 ೯ ಸತ್ಸಂಗತ್ವೇ ನಿಸ್ಸಂಗತ್ವಂ 06:49 ೧೦ ವಯಸಿ ಗತೇ ಕಃ ಕಾಮವಿಕಾರಃ? 07:29 ೧೧ ಮಾ ಕುರು ಧನ ಜನ ಯೌವನ ಗರ್ವಂ 08:09 ೧೨ ದಿನಯಾಮಿನ್ಯೌ, ಸಾಯಂ ಪ್ರಾತಃ 08:54 ೧೩ ಕಾ ತೇ ಕಾಂತಾ ಧನಗತಚಿಂತಾ? 09:40 ಕೃತಜ್ಞತೆ, ಸಂಪರ್ಕ
more
The Good & the Bad- ಒಳ್ಳಿದರು-ಕೆಟ್ಟವರು (subhashita)
2024/10/15
ಒಳ್ಳಿದರು-ಕೆಟ್ಟವರು 👍 Like it? ...... ⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠Subscribe to our newsletter The good and the badNoonam Dugdhabdhimanthoththa - Wimou Sujanadurjanou;Kintvindoh sodarah purvah Kalakutasya Chetarah! SubhashitaratnabhandagaraIt's a gem in the Subhashitaratnabhandagara.Where in the world did good and evil come from? How are the good and the bad born? There are good and bad siblings in the same family. Who has not heard the story of the Kaurava Pandavas. How did Prahlada, the son of the demon Hiranyakashyapu, and vibhishana, the brother of Ravana, become good? The Yadavas, the relatives of Lord Krishna, got destroyed by fighting among themselves! Genes are not the cause; They are the the same! It is not due to the environment; That too is the same. Culture and Rituals are all the same. So it is impossible to explain why.You all know the story of Samudramantha, Churning of the Ocean. Devas and Danavas -sons of two sisters, remember- gathered for amrita, tied Mandara Parvata using Vasuki as a rope, and churned the ocean of milk. Then came first Kalakuta, Halahala, terrible poison. Then came the moon. Chandra Shitanshu, the king of stars, patron of medicines, Radiant of Milky Light, best friend of lovers, chakkuli mama of children, and calendar keeper of our festivals! Born together, Halahala is wicked while Chandappa is needed by all.What does this have to do with the good and the bad in us?Behold, the poet imagines:The good and the bad Born in Hal Kadal Kadeye;Anna Chandappa for Saralari, Kudos to the villains!The poet says that we too were born in this sea. But, for the wicked, the wicked Kalakoota is their elder brother, and for the the good, Chandrama is their elder brother! That is how, some of us are good and some are bad!Be that as it may. Since everyone's birth culture is the same, the situation is not hopeless. That means change is possible. We have wisdom and discernment. So, whether we become good or bad is in our hands. The choice is ours and yours. The good and the bad both were Born when the Milky Ocean was churned;For the good, Chandappa is their elder brother, The wicked have Kalakootappa as their edler brother!Man, you choose!YoursVisvesvara DikshitaThe Good and the BadKannada Kali CastingVijayadashami, Oct 12, 2024_____ಚೆನ್ನುಡಿಒಳ್ಳಿದರು ಕೆಟ್ಟವರುನೂನಂ ದುಗ್ಧಾಬ್ಧಿಮಂಥೋತ್ಥಾ - ವಿಮೌ ಸುಜನದುರ್ಜನೌ;ಕಿಂತ್ವಿಂದೋಃ ಸೋದರಃ ಪೂರ್ವಃ ಕಾಲಕೂಟಸ್ಯ ಚೇತರಃ ! ಸುಭಾಷಿತರತ್ನಭಾಂಡಾಗಾರಇದು ಸುಭಾಷಿತ ಭಾಂಡಾಗಾರದಲ್ಲಿನ ಒಂದು ಅಣಿಮುತ್ತು.ಜಗತ್ತಿನಲ್ಲಿ ಒಳ್ಳೆಯದು ಕೆಟ್ಟದ್ದು ಎಲ್ಲಿಂದ ಬಂದವು? ಒಳ್ಳೆಯವರು ಕೆಟ್ಟವರು ಹುಟ್ಟಿದ್ದಾದರೂ ಹೇಗೆ? ಒಂದೇ ಮನೆತನದಲ್ಲಿ ಅಣ್ಣತಮ್ಮಂದಿರಲ್ಲೆ ಒಳ್ಳೆಯವರೂ ಕೆಟ್ಟವರೂ ಇರುತ್ತಾರೆ. ಕೌರವ ಪಾಂಡವರ ಕತೆ ಯಾರು ಕೇಳಿಲ್ಲ. ರಾಕ್ಷಸ ಹಿರಣ್ಯಕಷ್ಯಪುವಿನ ಮಗ ಪ್ರಹ್ಲಾದ‌, ರಾವಣನ ತಮ್ಮ ವಿಭೀಷಣ ಹೇಗೆ ಒಳ್ಳೆಯವರಾದರು? ಶ್ರೀ ಕೃಷ್ಣನ ದಾಯಾದಿಗಳಾದ ಯಾದವರು ತಮ್ಮ ತಮ್ಮಲ್ಲೆ ಹೊಡೆದಾಡಿಕೊಂಡು ನಿರ್ನಾಮವಾದರಲ್ಲ! ವಂಶವಾಹಿನಿ Geneಗಳು ಕಾರಣ ಎನ್ನಲಾಗುವುದಿಲ್ಲ; ಎಲ್ಲ ಒಂದೇ! ಬೆಳೆದ ವಾತಾವರಣ ಕಾರಣ ಎನ್ನಲಾಗುವುದಿಲ್ಲ; ಅದೂ ಒಂದೇ. ಸಂಸ್ಕಾರ ಸಂಸ್ಕೃತಿ ಎಲ್ಲವೂ ಒಂದೇ.‌ ಆದ್ದರಿಂದ ಯಾಕೆ ಹೀಗೆ ಎಂದು ವಿವರಿಸುವುದು ಅಸಾಧ್ಯ.ಸಮುದ್ರಮಂಥನ ಕತೆ ನಿಮಗೆಲ್ಲ ಗೊತ್ತಿದೆ. ದೇವದಾನವರು, ಇವರೂ ಅಕ್ಕ ತಂಗಿಯರ ಮಕ್ಕಳೇ, ನೆನಪಿಸಿಕೊಳ್ಳಿ, ಅಮೃತಕ್ಕೋಸ್ಕರ ಕೂಡಿಕೊಂಡು ಮಂದರ ಪರ್ವತವನ್ನು ಕಡೆಗೋಲಾಗಿ ಮತ್ತು ವಾಸುಕಿಯನ್ನು ಹಗ್ಗವನ್ನಾಗಿ ಬಳಸಿಕೊಂಡು ಕ್ಷೀರ ಸುಮುದ್ರವನ್ನು ಕಡೆದರು. ಆಗ ಮೊದಲು ಬಂದದ್ದೇ ಕಾಲಕೂಟ, ಹಾಲಾಹಲ, ಕೆಟ್ಟ ವಿಷ. ನಂತರ ಚಂದ್ರ ಬಂದ. ಚಂದ್ರನೋ ಶೀತಾಂಶು, ತಾರೆಗಳ ರಾಜ, ಓಷಧಿಗಳ ಪೋಷಕ, ಹಾಲ್‌ಬೆಳಕಿನ ಹೊಳಪ, ‌ಪ್ರೇಮಿಗಳ ಆಪ್ತಮಿತ್ರ, ಮಕ್ಕಳಿಗೆ ಚಕ್ಕುಲಿ ಮಾಮ, ನಮ್ಮ ಹಬ್ಬಹುಣ್ಣಿಮೆಗಳ calendar keeper ಕೂಡ! ಒಂದೇ ಹುಟ್ಟು, ಕಾಲಕೂಟ ಕೆಟ್ಟದ್ದಾದರೆ, ಚಂದಪ್ಪ ಎಲ್ಲರಿಗೂ ಬೇಕಾದವನಾದ. ಇದಕ್ಕೂ ಮತ್ತೂ ನಮ್ಮಲ್ಲಿನ ಒಳ್ಳೆ-ಕೆಟ್ಟವರಿಗೂ ಏನು ಸಂಬಂಧ? ಇದೋ ನೋಡಿ, ಕವಿ ಕಲ್ಪನೆ:ಒಳ್ಳಿದರು ಕೆಟ್ಟವರು ಕೂಡೆ ಹುಟ್ಟಿದರು ಹಾಲ್‌ ಕಡಲ ಕಡೆಯೆ;ಸರಳರಿಗೆ ಅಣ್ಣ ಚಂದಪ್ಪ, ದುರುಳರಿಗೆ ಹಾಲಾಹಲಪ್ಪ!ನಾವು ಕೂಡ ಹುಟ್ಟಿದ್ದು ಈ ಸಮುದ್ರದಲ್ಲೆ ಎನ್ನುತ್ತಾನೆ ಕವಿ. ಆದರೆ, ದುರುಳರಿಗೆ ದುಷ್ಟರಿಗೆ ಹಾಲಹಲವೆ ಸೋದರ , ಸರಳರಿಗೆ ಶಿಷ್ಟರಿಗೆ ಚಂದ್ರಮನೆ ಅಣ್ಣ ಅಂತೆ! ಅದಕ್ಕೆ .... Read Moreಒಳ್ಳಿದರು-ಕೆಟ್ಟವರುಕನ್ನಡ ಕಲಿ ಬಿತ್ತರಿಕೆವಿಜಯದಶಮಿ, ಅಕ್ಟೋಬರ ೧೨, ೨೦೨೪
more
ಕಂತು ೨: ಟಕಟಕ ಜೋಕು, ಇನ್ನೂ ಬೇಕು ! Knock-Knock Jokes! -ನಾಕು ಜೋಕು, ಬೇಕೇ ಬೇಕು !
2024/09/27
👍 Like it? ...... ⁠⁠⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠⁠⁠  📧 ⁠⁠⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠⁠⁠ 📞 ⁠⁠⁠Subscribe to WhatsApp ಕನ್ನಡ ಕಂಪು⁠ ಇಗೋ! ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿ ನಾಕ್-ನಾಕು ಜೋಕುಗಳು! ಮಕ್ಕಳಿಗೆ ಮುದ ನೀಡುವ knock-knock ಜೋಕುಗಳು ಇಂಗ್ಲಿಷಲ್ಲಿ ಸರ್ವೇ ಸಾಮಾನ್ಯ. ೨೦ನೆ ಶತಮಾನದ ಆರಂಭದಿಂದಲೆ ಅಮೆರಿಕದ ಇತಿಹಾಸದಲ್ಲಿ ಚಿಗುರೊಡೆದ ನಾಕ್-ನಾಕು ಜೋಕುಗಳು ಇಂದೂ ಜನಪ್ರಿಯವಾಗಿವೆ. ವಿಶೇಷವಾಗಿ ಮಕ್ಕಳಿಗೆ ಪ್ರಿಯವಾದರೂ, ದೊಡ್ಡವರನ್ನೂ ನಗಿಸಬಹುದು. ಇವು ಹಾಸ್ಯ ಚಟಾಕಿಗಳೋ, ಮಕ್ಕಳ ಮುದ್ದು ಮಾತುಗಳೋ ಅಥವ ಪೆದ್ದು ಗೊಜಗುಟ್ಟುವಿಕೆಗಳೋ ಇನ್ನೂ ಇತ್ಯರ್ಥವಾಗಿಲ್ಲ! [ಹೆಚ್ಚಿನ ಮಾಹಿತಿಗೆ: ಕೆಳಗೆ ನಮೂದಿಸಿರುವ ⁠ನ್ಯಾಶನಲ್‌ ಪಬ್ಲಿಕ್‌ ರೇಡಿಯೋದ ಲೇಖನ⁠ವನ್ನು ಓದಿ. [https://www.npr.org/sections/npr-history-dept/2015/03/03/389865887/the-secret-history-of-knock-knock-jokes]ಕನ್ನಡದಲ್ಲಿ ಇವು ಮೊದಲ ನಾಕ್-ನಾಕು ಜೋಕುಗಳು ಎನ್ನಬಹುದು. ಓದಿ ನಲಿಯಿರಿ. ಇಂಥ ಅಥವ ಬೇರೆ ತರಹದ ನಾಕು ನಾಕ್-ನಾಕು ಜೋಕುಗಳನ್ನು ನೀವೂ ರಚಿಸಿ, ಕಾಮೆಂಟು ಹಾಕಿರಿ. ಮಾದರಿ ಜೋಕುಗಳು ಬೇಕಾಗಿದ್ದರೆ, "⁠knock-knock Jokes" ಅಂತ ಗೂಗಲಿಸದರೆ ⁠ಸಾವಿರಾರು ಜೋಕುಗಳು ಸಿಗುತ್ತವೆ [https://www.google.com/search?q=knock+knock+jokes]ಎಚ್ಚರಿಕೆ! ನಾಕು-ನಾಕು ಜೋಕುಗಳನ್ನು ಬೇರೆ ಭಾಷೆಯಿಂದ ಕಾಪಿ ಹೊಡೆಯಲು ಸಾಧ್ಯವಿಲ್ಲ! ಕೆಳಗಿನವುಗಳನ್ನು ಮಾದರಿಯಾಗಿ ಇಟ್ಟುಕೊಂಡು ಸ್ವಂತ ಟಕ-ಟಕ ಯಾ ಕಟ-ಕಟ ಜೋಕುಗಳನ್ನು ಕಟ್ಟಿರಿ ಯಾ ಕುಟ್ಟಿರಿ.ಇಲ್ಲಿನ ಕೆಲವು ಜೋಕುಗಳು, ⁠ಕನ್ನಡ ಕಲಿ ಮ್ಯಗ್‌ಝೀನ್‌ ಸಂಪುಟ ೧, ಸಂಚಿಕೆ ೨, ಜೂನ್ ೨೦೦೬,⁠ ರಲ್ಲಿ ಪ್ರಕಟವಾಗಿದ್ದವು.[https://www.scribd.com/doc/36032085/V01I02-Kannada-Kali-ಕನ-ನಡ-ಕಲಿ-June-2006] ಪುಟ ೫ರಲ್ಲಿ ಪ್ರಕಟವಾಗಿದ್ದವು-------- ಕಂತು ೨ --------ಟಕ-ಟಕ, ಟಕ್ ಯಾರು ಅಲ್ಲಿ?ದ್ರಾಕ್ಷಿ. ಯಾರು ದ್ರಾಕ್ಷಿ?ಕೊಳ್ಳಾಗಿನ ರುದ್ರಾಕ್ಷಿ ಸರ!‌ಟಕ-ಟಕ, ಟಕ್ ಯಾರು ಅದು?ಮಾರಿ. ಯಾ ಮಾರಿ?ಸೈಬರ್‌ ಕಳ್ಳಿ!ಟಕ-ಟಕ, ಟಕ್ ಯಾರು ಅಲ್ಲಿ?ಒತ್ತು. ಯಾ ಒತ್ತು?ಯಾವತ್ತು ಆದರೆ ಏನು? ಇವತ್ತೇ!ಟಕ-ಟಕ, ಟಕ್ ಯಾರು ಅದು?ದನ. ಯಾರೋ ದನ?ಅಳುತ್ತ ಕೂತಿರೋ ರೋದನ!ಟಕ-ಟಕ, ಟಕ್ ಯಾರು ಅದು?ಮಿನಿ. ಯಾ ಮಿನಿ?ರಾತ್ರಿ ಬರುವವಳು!ಟಕ-ಟಕ, ಟಕ್ ಯಾರು ಅಲ್ಲಿ?ಮತ್ತ. ಮತ್ ಯಾರು?ಮತ್ಯಾರು? ನಾನೇ!!ಟಕ-ಟಕ, ಟಕ್ ಯಾರು ಅದು?ಹತ್ತ. ಹತ್ ಯಾರು?ಹೌದು, ಹತ್ಯಾರು, ಇರೀತೀನಿ ಹುಷಾರು!!ಟಕ-ಟಕ, ಟಕ್ ಯಾರು ಅದು?ನಾ. ನಾ ಯಾರು?ನಾಯರು, ನಾ ಗೋವಿಂದ ನಾಯರು, ನೀ ಯಾರು?---ಕನ್ನಡ ಕಲಿ ಬಿತ್ತರಿಕೆ ಸಪ್ಟಂಬರ ೨೭, ೨೦೨೪Kannada Kali Bittarike September 27, 2024ಟಕಟಕ ಜೋಕು : ಇನ್ನೂ ಬೇಕುನಾಕ್-ನಾಕು ಜೋಕು : ಬೇಕೇ ಬೇಕುಕಂತು ೧ ಜೋಕು ನಿರೂಪಕರು: ಗಗನ ಗೂಗ್ಲೆ ಮತ್ತು ಸಪ್ನಾ ಗೂಗ್ಲೆ
more
ಕಂತು ೧: ಟಕಟಕ ಜೋಕು, ಇನ್ನೂ ಬೇಕು ! Knock-Knock Jokes! -ನಾಕು ಜೋಕು, ಬೇಕೇ ಬೇಕು !
2024/09/27
👍 Like it? ...... ⁠⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠⁠  📧 ⁠⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠⁠ 📞 ⁠⁠Subscribe to WhatsApp ಕನ್ನಡ ಕಂಪು ಇಗೋ! ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿ ನಾಕ್-ನಾಕು ಜೋಕುಗಳು! ಮಕ್ಕಳಿಗೆ ಮುದ ನೀಡುವ knock-knock ಜೋಕುಗಳು ಇಂಗ್ಲಿಷಲ್ಲಿ ಸರ್ವೇ ಸಾಮಾನ್ಯ. ೨೦ನೆ ಶತಮಾನದ ಆರಂಭದಿಂದಲೆ ಅಮೆರಿಕದ ಇತಿಹಾಸದಲ್ಲಿ ಚಿಗುರೊಡೆದ ನಾಕ್-ನಾಕು ಜೋಕುಗಳು ಇಂದೂ ಜನಪ್ರಿಯವಾಗಿವೆ. ವಿಶೇಷವಾಗಿ ಮಕ್ಕಳಿಗೆ ಪ್ರಿಯವಾದರೂ, ದೊಡ್ಡವರನ್ನೂ ನಗಿಸಬಹುದು. ಇವು ಹಾಸ್ಯ ಚಟಾಕಿಗಳೋ, ಮಕ್ಕಳ ಮುದ್ದು ಮಾತುಗಳೋ ಅಥವ ಪೆದ್ದು ಗೊಜಗುಟ್ಟುವಿಕೆಗಳೋ ಇನ್ನೂ ಇತ್ಯರ್ಥವಾಗಿಲ್ಲ! [ಹೆಚ್ಚಿನ ಮಾಹಿತಿಗೆ: ಕೆಳಗೆ ನಮೂದಿಸಿರುವ ನ್ಯಾಶನಲ್‌ ಪಬ್ಲಿಕ್‌ ರೇಡಿಯೋದ ಲೇಖನವನ್ನು ಓದಿ. [https://www.npr.org/sections/npr-history-dept/2015/03/03/389865887/the-secret-history-of-knock-knock-jokes]ಕನ್ನಡದಲ್ಲಿ ಇವು ಮೊದಲ ನಾಕ್-ನಾಕು ಜೋಕುಗಳು ಎನ್ನಬಹುದು. ಓದಿ ನಲಿಯಿರಿ. ಇಂಥ ಅಥವ ಬೇರೆ ತರಹದ ನಾಕು ನಾಕ್-ನಾಕು ಜೋಕುಗಳನ್ನು ನೀವೂ ರಚಿಸಿ, ಕಾಮೆಂಟು ಹಾಕಿರಿ. ಮಾದರಿ ಜೋಕುಗಳು ಬೇಕಾಗಿದ್ದರೆ, "knock-knock Jokes" ಅಂತ ಗೂಗಲಿಸದರೆ ಸಾವಿರಾರು ಜೋಕುಗಳು ಸಿಗುತ್ತವೆ [https://www.google.com/search?q=knock+knock+jokes]ಎಚ್ಚರಿಕೆ! ನಾಕು-ನಾಕು ಜೋಕುಗಳನ್ನು ಬೇರೆ ಭಾಷೆಯಿಂದ ಕಾಪಿ ಹೊಡೆಯಲು ಸಾಧ್ಯವಿಲ್ಲ! ಕೆಳಗಿನವುಗಳನ್ನು ಮಾದರಿಯಾಗಿ ಇಟ್ಟುಕೊಂಡು ಸ್ವಂತ ಟಕ-ಟಕ ಯಾ ಕಟ-ಕಟ ಜೋಕುಗಳನ್ನು ಕಟ್ಟಿರಿ ಯಾ ಕುಟ್ಟಿರಿ.ಇಲ್ಲಿನ ಕೆಲವು ಜೋಕುಗಳು, ಕನ್ನಡ ಕಲಿ ಮ್ಯಗ್‌ಝೀನ್‌ ಸಂಪುಟ ೧, ಸಂಚಿಕೆ ೨, ಜೂನ್ ೨೦೦೬, ರಲ್ಲಿ ಪ್ರಕಟವಾಗಿದ್ದವು.[https://www.scribd.com/doc/36032085/V01I02-Kannada-Kali-ಕನ-ನಡ-ಕಲಿ-June-2006] ಪುಟ ೫ರಲ್ಲಿ ಪ್ರಕಟವಾಗಿದ್ದವು------- ಕಂತು ೧ -------ಟಕ-ಟಕ, ಟಕ್ ಯಾರು ಅಲ್ಲಿ?ಮಂಗಲಾ. ಮಂಗಲಾ ಯಾರು?ಲಾಯರು ನಾನು, ಮಂಗ ನೀನು. ಲಗೂನ ತಗೀ ಬಾಗಿಲ!ಟಕ-ಟಕ, ಟಕ್ ಯಾರು ಅದು?ಸುಮ ನಾ ಸುಮನಾ ಯಾರು?ಸುಮ ನಾ; ನೀ ಯಾರು ನನಗೇನು ಗೊತ್ತು?ಟಕ-ಟಕ, ಟಕ್ ಯಾರು ಅಲ್ಲಿ?ನಾಥ. ನಾತ ಯಾರು?ತಯಾರು ಇದ್ರೆ ಬಾಗಿಲ ತೆಗೆದು ಮೂಸು.ಟಕ-ಟಕ, ಟಕ್ ಯಾರು ಅದು?ಉಪ್ಪು ಕಾರ. ಉಪ್ಪು ಕಾರ ಯಾರು?ಉಪಕಾರ ಮಾಡಿ ಬಾಗಿಲ ತೆಗೀಯೆ ಮಾರಾಯತಿ!ಟಕ-ಟಕ, ಟಕ್ ಯಾರು ಅದು?ಮಾಲು. ಯಾರು ಮಾಲು?ತಲೆಗೆ ಸುತ್ತಿಕೊಳ್ಳುವುದು.ಟಕ-ಟಕ, ಟಕ್ ಯಾರು ಅಲ್ಲಿ?ಕುಮಾಯಿ. ಯಾರು ಕುಮಾಯಿ?ಪಂಢರಪುರದ ವಿಠ್ಠಲ ರುಕುಮಾಯಿ!ಟಕ-ಟಕ, ಟಕ್ ಯಾರು ಅಲ್ಲಿ?ಪೈ. ಯಾರು ಪೈ?ಲಕ ಲಕ ಹೊಳೀತಿರೋ ಬೆಳ್ಳೀ ಪೈ.ಟಕ-ಟಕ, ಟಕ್ ಯಾರು ಅದು?ಜಿನ. ಯಾರು ಜಿನ?ಬರಬಾರದ ರೋಗ ರುಜಿನ.-------- ಕಂತು ೨ --------ಟಕ-ಟಕ, ಟಕ್ ಯಾರು ಅಲ್ಲಿ?ದ್ರಾಕ್ಷಿ. ಯಾರು ದ್ರಾಕ್ಷಿ?ಕೊಳ್ಳಾಗಿನ ರುದ್ರಾಕ್ಷಿ ಸರ!‌ಟಕ-ಟಕ, ಟಕ್ ಯಾರು ಅದು?ಮಾರಿ. ಯಾ ಮಾರಿ?ಸೈಬರ್‌ ಕಳ್ಳಿ!ಟಕ-ಟಕ, ಟಕ್ ಯಾರು ಅಲ್ಲಿ?ಒತ್ತು. ಯಾ ಒತ್ತು?ಯಾವತ್ತು ಆದರೆ ಏನು? ಇವತ್ತೇ!ಟಕ-ಟಕ, ಟಕ್ ಯಾರು ಅದು?ದನ. ಯಾರೋ ದನ?ಅಳುತ್ತ ಕೂತಿರೋ ರೋದನ!ಟಕ-ಟಕ, ಟಕ್ ಯಾರು ಅದು?ಮಿನಿ. ಯಾ ಮಿನಿ?ರಾತ್ರಿ ಬರುವವಳು!ಟಕ-ಟಕ, ಟಕ್ ಯಾರು ಅಲ್ಲಿ?ಮತ್ತ. ಮತ್ ಯಾರು?ಮತ್ಯಾರು? ನಾನೇ!!ಟಕ-ಟಕ, ಟಕ್ ಯಾರು ಅದು?ಹತ್ತ. ಹತ್ ಯಾರು?ಹೌದು, ಹತ್ಯಾರು, ಇರೀತೀನಿ ಹುಷಾರು!!ಟಕ-ಟಕ, ಟಕ್ ಯಾರು ಅದು?ನಾ. ನಾ ಯಾರು?ನಾಯರು, ನಾ ಗೋವಿಂದ ನಾಯರು, ನೀ ಯಾರು?---ಕನ್ನಡ ಕಲಿ ಬಿತ್ತರಿಕೆ ಸಪ್ಟಂಬರ ೨೭, ೨೦೨೪Kannada Kali Bittarike September 27, 2024ಟಕಟಕ ಜೋಕು : ಇನ್ನೂ ಬೇಕುನಾಕ್-ನಾಕು ಜೋಕು : ಬೇಕೇ ಬೇಕುಕಂತು ೧ ಜೋಕು ನಿರೂಪಕರು: ಗಗನ ಗೂಗ್ಲೆ ಮತ್ತು ಸಪ್ನಾ ಗೂಗ್ಲೆ
more
ಭಾಷೆ ಕಲಿಸಬೇಕಾದ್ದು ಹೇಗೆ How a Language Ought to be Taught
2024/08/24
👍 Like it? ...... ⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠  📧 ⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠ 📞 ⁠Subscribe to WhatsApp ಕನ್ನಡ ಕಂಪು [ ಜುಲೈ ೨೨, ೧೯೩೮ರಂದು ಜನಿಸಿ, ಅದ್ವಿತೀಯ ಕಾದಂಬರಿಕಾರ, ನಾಟಕಕಾರ, ಕವಿ, ಭಾಷಾತಜ್ಞ, ಶಿಕ್ಷಕ ಮತ್ತು ಕೃಷಿಕ ಆಗಿದ್ದ , ಕಾಸರಗೋಡಿನ ಕನ್ನಡಿಗ ಕೆ.ಟಿ.ಗಟ್ಟಿ ಅವರು ಫೆಬ್ರುವರಿ ೧೯, ೨೦೨೪ರಂದು ತಮ್ಮ ೮೫ನೆ ವಯಸ್ಸಿನಲ್ಲಿ ಮಂಗಳೂರಿನಲ್ಲಿ ನಿಧನರಾದರು. ಈ ಲೇಖನ ಜೂನ್ ೨೦೦೮ರ‌ ಕನ್ನಡ ಕಲಿ ಮ್ಯಗ್‌ಝೀನ್‌ನಲ್ಲಿ ಪ್ರಕಟವಾಗಿತ್ತು. ಕನ್ನಡ ಕಲಿಗಳಿಗೆ ಇದು ಇಂದೂ ಮಾರ್ಗದರ್ಶಿಯಾಗಿದೆ. -ಸಂ]ಭಾಷೆ ಕಲಿಸಬೇಕಾದ್ದು ಹೇಗೆHow a Language Ought to be Taughtಬರೆಹ: ಕೆ. ಟಿ. ಗಟ್ಟಿಓದು: ವಿಶ್ವೇಶ್ವರ ದೀಕ್ಷಿತಸಂಗೀತ: ಆಕಾಶ ದೀಕ್ಷಿತ[ಕೆ.ಟಿ. ಗಟ್ಟಿ ಅವರು ಈ ಲೇಖನದಲ್ಲಿ ಹೇಳುವ ಮಾತುಗಳು, ಕರ್ನಾಟಕದಲ್ಲಿ ಕನ್ನಡ ಮಕ್ಕಳಿಗೆ ಇಂಗ್ಲೀಷ್‌ ಕಲಿಸುವ ಕುರಿತು ಹೇಳಿದಂತೆ ಅನಿಸಬಹುದು. ಆದರೆ ಅವೆಲ್ಲ ವಿದೇಶದಲ್ಲಿ ಹುಟ್ಟಿ ಬೆಳೆಯುತ್ತಿರುವ ಕನ್ನಡ ಮಕ್ಕಳಿಗೆ ಕನ್ನಡ ಕಲಿಸುದಕ್ಕೂ ಸಂಪೂರ್ಣವಾಗಿ ಅನ್ವಯಿಸುತ್ತವೆ ಎನ್ನುವುದನ್ನು ನಾವು ವಿಶೇಷವಾಗಿ ಗಮನದಲ್ಲಿ ಇಡಬೇಕು - ಸಂ]ಭಾಷೆಯ ಆರಂಭ : ಮಾತುಕನ್ನಡದ ತಾಯಿ ತೊಟ್ಟಿಲ ಮಗುವಿಗೆ ಅಆಇಈ ಎಂದು ಜೋಗುಳ ಹಾಡುವುದಿಲ್ಲ. ಬ್ರಿಟಿಷ್ ತಾಯಿ ಎಬಿಸಿಡಿ ಎಂದು ಜೋಗುಳ ಹಾಡುವುದಿಲ್ಲ.ಭಾಷೆ ಮಾತಿನಿಂದ ಆರಂಭವಾಗುತ್ತದೆ. ‘ಅಕ್ಷರ ಓದುವಿಕೆ ಮತ್ತು ಬರೆಯುವಿಕೆ’ಯಿಂದ ಅಲ್ಲ. ಶಾಲೆಯನ್ನು ಪ್ರವೇಶಿಸುವ ಮೊದಲೇ ಕನ್ನಡದ ಮಗು ಚೆನ್ನಾಗಿ ಕನ್ನಡವನ್ನು ಆಡಲು ಕಲಿತುಕೊಂಡಿರುತ್ತದೆ. ಅದಕ್ಕೆ ‘ಕಷ್ಟ ಶಬ್ದ’ ‘ಸುಲಭ ಶಬ್ದ’ ಎಂಬ ವ್ಯತ್ಯಾಸವೇನೂ ಕಾಣಿಸುವುದಿಲ್ಲ. ಅರ್ಥವಾಗುವ ಮತ್ತು ಉಚ್ಚರಿಸಲಾಗುವ ಎಲ್ಲಾ ಶಬ್ದಗಳೂ ಸುಲಭ ಶಬ್ದಗಳೇ. ಮನೆಯಲ್ಲಿ ಅಪ್ಪ ಅಮ್ಮ ಅಕ್ಕ ಅಣ್ಣ ಆಡಿದ ಮಾತುಗಳೆಲ್ಲವನ್ನೂ ಅದು ಆಡುತ್ತದೆ. ಅವೆಲ್ಲವೂ ಮಗುವಿಗೆ ಅರ್ಥವಾಗುವ ವಾಕ್ಯಗಳೇ.ಮೊದಲ ಪಠ್ಯಪುಸ್ತಕ ಹೇಗಿರಬೇಕುಮಗುವಿನ ಮೊದಲನೆಯ ಪಠ್ಯಪುಸ್ತಕದ ಪಾಠಗಳಲ್ಲಿ ಆ ವಾಕ್ಯಗಳು ಮತ್ತು ಅಂಥ ವಾಕ್ಯಗಳೇ ಇರಬೇಕು. ‘ಅವನು ಬಸವ ಇವಳು ಕನಕ’ ಇತ್ಯಾದಿ ಅರ್ಥಹೀನ ವಾಕ್ಯಗಳು ಇರಬಾರದು. ಮನುಷ್ಯ (ಮಗು) ಭಾಷೆಯನ್ನು ಮಾತಾಡಲು ಆರಂಭಿಸುವುದು ಅಆಇಈ ಬರುವ ಶಬ್ದಗಳಿಂದಲ್ಲ. ತಾನು ಅನುಕರಣೆಯಿಂದ ಪಡೆದುಕೊಂಡ ತನಗೆ ಅರ್ಥವಾಗುವಂಥ ಮಾತುಗಳಿಂದ ಮಾತು ಆರಂಭವಾಗುತ್ತದೆ. ಇಂಗ್ಲೆಂಡಿನಲ್ಲಿ ಇಂಗ್ಲಿಷ್ ಮಗು ಭಾಷಾರ್ಜನೆ ಮಾಡುವುದು ಕೂಡ ಹೀಗೆಯೇ. ಅಕ್ಷರಾಭ್ಯಾಸವಿಲ್ಲದ ಜನರು ಕೂಡ ಚಲೋದಾಗಿ ಮಾತಾಡುವುದಿಲ್ಲವೆ? ಅವರು ಹೇಗೆ ಭಾಷೆಯನ್ನು ಕಲಿತುಕೊಳ್ಳುತ್ತಾರೆ? ಅದೇ ರೀತಿ ಮಗು ಕೂಡ ಐದನೇ ವರ್ಷ ಪ್ರಾಯಕ್ಕೆ ಬಂದಾಗ ಒಂದಷ್ಟು ಭಾಷೆಯನ್ನು ಪಡೆದುಕೊಂಡಿರುತ್ತದೆ. ಅಂಥ ಮಗುವಿಗೆ ಅರಸ, ಇಣಚಿ ಮುಂತಾದ ಶಬ್ದಗಳಿಂದ, ಕ್ರಿಯಾಪದವಿಲ್ಲದ ವಾಕ್ಯಗಳಿಂದ ಭಾಷಾಭ್ಯಾಸ ಆರಂಭಿಸಬೇಕಾದ ಅಗತ್ಯವೇನು? ಮಾತು-ಗರುತು-ಓದು-ಬರೆ ವಿಧಾನನಾವು ಇಂಗ್ಲಿಷ್ ಕಲಿಸುವಲ್ಲಿ ಕೂಡ ಈ ರೀತಿ ನೈಸರ್ಗಿಕವಾಗಿ ಮಗು ತನ್ನ ಮಾತೃಭಾಷೆಯನ್ನು ಹೇಗೆ ಪಡೆಯುತ್ತದೆಯೋ ಹಾಗೆ ಪಡೆಯುವ ವಿಧಾನದಲ್ಲಿಯೇ ಕಲಿಸಬೇಕು. ಕನ್ನಡ ಮಗುವಿನ ಮಾತೃಭಾಷೆಯಾದ್ದರಿಂದ, ಒಂದನೇ ತರಗತಿಯಲ್ಲೇ ಓದು ಮತ್ತು ಬರೆಯುವಿಕೆ ವಾಕ್ಯಗಳಿಂದಲೇ ಆರಂಭಿಸಬಹುದು. ಮಗು ಅಕ್ಷರಗಳನ್ನು ನೋಡಿ ಶಬ್ದಗಳನ್ನು ಗುರುತಿಸಿಕೊಂಡು ಚೆನ್ನಾಗಿ ಓದಲು ಕಲಿತುಕೊಂಡ ಬಳಿಕ, ಶಬ್ದಗಳನ್ನು ಬರೆದು ಓದಿ ತೋರಿಸಬೇಕು. ಈ ಓದಿನ ಮೂಲಕ ಮಗುವಿಗೆ ಎಲ್ಲಾ ಅಕ್ಷರ ಪರಿಚಯ, ಅವುಗಳು ಮಾತಿನಲ್ಲಿ ಹೇಗೆ ಬರುತ್ತವೆಯೋ ಹಾಗೆ ಪರಿಪೂರ್ಣವಾಗಿ ಆಗುತ್ತದೆ. ಅನಂತರ ಶಬ್ದಗಳನ್ನು ಓದುತ್ತಾ ಇಡೀ ವಾಕ್ಯವನ್ನು ಬರೆಯಲು ಕಲಿಸಬೇಕು. ಹೀಗೆ ಕಲಿಸಿದರೆ, ಪರಂಪರಾಗತ ಅಆಇಈ ಅಕ್ಷರಗಳ ಮೂಲಕ ಕಲಿಯುವುದಕ್ಕಿಂತ ಚಲೋದಾಗಿ, ಸ್ಪಷ್ಟವಾಗಿ, ಅರ್ಥಪೂರ್ಣವಾಗಿ ಮತ್ತು ಆಶ್ಚರ್ಯಕರವೆನಿಸುವಷ್ಟು ವೇಗವಾಗಿ ಮಗು ಓದಲು ಬರೆಯಲು ಕಲಿತುಬಿಡುತ್ತದೆ. ಒಂದನೆಯ ದರ್ಜೆಯ ಪುಸ್ತಕ ಮೂರು ತಿಂಗಳಲ್ಲಿ ಮುಗಿದು ಹೋಗುತ್ತದೆ. ಮಗುವಿಗೆ ಓದಲು ಅಧ್ಯಾಪಕ ಮತ್ತು ತಾಯಿತಂದೆ ಬೇರೆ ಪುಸ್ತಕ ಹುಡುಕಬೇಕಾಗುತ್ತದೆ!‘ಅ’ದಿಂದ ‘ಹ’ದ ವರೆಗೆ ಹೇಳಿಸುವುದು, ಓದಿಸುವುದು, ಬರೆಸುವುದು ಮಗುವಿಗೆ ನರಕ; ಮಗುವಿನ ಅಮೂಲ್ಯವಾದ ಕಲಿಯುವ ಸಮಯ ಪೋಲು! ಇಂಗ್ಲಿಷ್ ನಮ್ಮ ಮಗುವಿನ ಮಾತೃಭಾಷೆಯಲ್ಲವಾದ್ದರಿಂದ ಅದಕ್ಕೆ ಮೊದಲು ಮಾತಿನ ಮೂಲಕ ಇಂಗ್ಲಿಷ್ ಭಾಷೆಯ ಪರಿಚಯ ಆಗಬೇಕು. ಅಂದರೆ ಇಂಗ್ಲಿಷ್ ಕೂಡ ತನ್ನ ಮಾತೃಭಾಷೆಯಂತೆಯೇ ಒಂದು ಭಾಷೆ ಎಂಬ ಭಾವನೆ ಮಗುವಿಗೆ ಆಗಬೇಕು. ಅದಕ್ಕಾಗಿ ಇಂಗ್ಲಿಷಿನಲ್ಲಿ ಒಂದು ಅಥವಾ ಎರಡು ವರ್ಷ ಸಂಭಾಷಣೆ ಮಾತ್ರ ನಡೆಯಬೇಕು. ಮಕ್ಕಳನ್ನು ತರಗತಿ ಕೋಣೆಯಿಂದ ಹೊರಗೆ ಕರೆದುಕೊಂಡು ಹೋಗಿ ನಿಸರ್ಗದಲ್ಲಿರುವ ನೂರಾರು ವಸ್ತುಗಳನ್ನು ತೋರಿಸಿ ಅವುಗಳನ್ನು ಹೆಸರಿಸಿ ಅವುಗಳ ಬಗ್ಗೆ ಮಾತಾಡಬೇಕು.ಕಲಿಯಲು ಪರಿಸರ ಬೇಕುನಗರದ ಮುಕ್ಕಾಲು ಪಾಲು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ‘ಆಂಗ್ಲ’ ಪರಿಸರವೂ ಇಲ್ಲ, ಭಾರತೀಯ ಪರಿಸರವೂ ಇಲ್ಲ. ಆಕಾಶ ಕೂಡ ಕಾಣಿಸದ ಕೋಣೆಯಲ್ಲಿ ...__________ ಪೂರ್ತಿ ಲೇಖನ ಇಲ್ಲಿದೆ: https://kannadakali.com/article/language/onteachinglanguage.html----ಕನ್ನಡ ಕಲಿ ಬಿತ್ತರಿಕೆ, ಕನ್ನಡದ ಗುಟ್ಟು, ಅಗಸ್ಟ್‌ ೨೩, ೨೦೨೪How a Language Ought to be Taught,ಲೇಖನ: ಕೆಟಿ ಗಟ್ಟಿ:,ಓದು: ವಿಶ್ವೇಶ್ವರ ದೀಕ್ಷಿತ,ಸಂಗೀತ: ಆಕಾಶ ದೀಕ್ಷಿತ,ಪಠ್ಯದಿಂದ ಧ್ವನಿಗೆ, ನೀರಜಾ ಗೂಗ್ಲೇ ಮತ್ತು ನಾನು, ಸಪ್ನಾ ಗೂಗ್ಲೇ,. ಸಂಪರ್ಕ, ನಮೋವಿಶ್ ಯ್ಯಾಟ್ ಯಾಹೂ ಡಾಟ್ ಕಾಮ್,.ಬಿತ್ತರಿಕೆ 15, ಕಾಲ 2024, ಸಂಖ್ಯೆ 3, ಬಿಕಾಸ 15 2024 3. Episode 15,
more
Gandhi: Part 3 - What You Said ಗಾಂಧಿ - ಕಂತು ೩ : ನಿಮ್ಮ ಏನಂತಿಗಳು
2024/06/01
👍 Like it? ...... ⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠  📧 ⁠⁠⁠⁠⁠⁠⁠⁠⁠⁠⁠⁠Subscribe to our newsletter 📞 Subscribe to WhatsApp ಕನ್ನಡ ಕಂಪುಮಹಾತ್ಮ ಗಾಂಧಿ - ಕಂತು ೩ : ಒಪ್ಪು - ತಪ್ಪು : ನಿಮ್ಮ ಏನಂತಿಗಳುಗಾಂಧಿ ಮಹಾತ್ಮನೆ? ಗಾಂಧಿ ಮಾಡಿದ್ದೆಲ್ಲ ಸರಿಯೆ? ನಾವು ಎಡವಿದೆವೆ? ಲಾಭ ಆದದ್ದು ಅಗುತ್ತಿರುವುದು ಯಾರಿಗೆ?ಗಾಂಧಿ ಲೇಖನಕ್ಕೆ ಮತ್ತು ಗಾಂಧಿಯ ಬಗ್ಗೆ ಸೈದ್ಧಾಂತಿಕ ಮತ್ತು ವ್ಯಾವಹಾರಿಕ ನೆಲೆಗಳಲ್ಲಿ ವಿಚಾರಪೂರ್ಣ ಏನಂತಿಗಳನ್ನು ನಿಖರ ನುಡಿಗಳಲ್ಲಿ ಹಂಚಿಕೊಂಡ ಕೆ.ಪಿ. ರವಿಕುಮಾರ್, ಹೊಳಲ್ಕೆರೆ ಆರ್.‌ ಲಕ್ಷ್ಮೀವೆಂಕಟೇಶ, ಶ್ರೀನಿವಾಸ ಭಟ್, ಶ್ರೀನಿವಾಸ ಹೆಬ್ಬಾಳ, ಕೆ.ಟಿ. ಶೆಟ್ಟಿ, ಸ್ಮಿತಾ,ಮತ್ತು ತಮ್ಮ ಇಷ್ಟಾನಿಷ್ಟಗಳನ್ನು ವ್ಯಕ್ತಪಡಿಸಿದ ಎಲ್ಲ ಕನ್ನಡ ಕಲಿ ಓದುಗರಿಗೆ ನಮನಗಳು.೧. ಸತ್ಯಾಸತ್ಯತೆಗಾಂಧಿ ಲೇಖನಕ್ಕೆ ಪ್ರತಿಕ್ರಿಯೆಯಿಸುತ್ತ "ಮಾಹಿತಿ ಪೂರ್ಣ ಲೇಖನ, ಒಳ್ಳೆಯ ಲೇಖನ " ಎಂದು ಸ್ಮಿತಾ ಅವರಿಗೆ ಅನಿಸಿದರೆ, ಕೆ. ಟಿ. ಶೆಟ್ಟಿ ಹೇಳುತ್ತಾರೆ, "ಕೆಲವು ಸತ್ಯ, ಕೆಲವು ಅರ್ಧ ಸತ್ಯ, ಇನ್ನು ಕೆಲವು ಪ್ರಶ್ನಾರ್ಥಕ ಸತ್ಯ." ಆದರೂ, "ಒಟ್ಟಿನಲ್ಲಿ ಗಾಂಧಿ ಒಬ್ಬ ಮಹಾತ್ಮನಾದ ಮಾನವ, ಮನುಕುಲಕ್ಕೊಂದು ಆದರ್ಶ!" ಎಂದು ಒಪ್ಪಿಕೊಳ್ಳುತ್ತಾರೆ.ಶ್ರೀನಿವಾಸ ಭಟ್ಟರು ಗಾಂಧಿ‌ ಪ್ರಯೋಗಿಸಿದ ಮೂರು ಪರಮಾಸ್ತ್ರಗಳನ್ನು ಗುರುತಿಸಿದ್ದರೆ‌, ಅದರಿಂದ "ಗಾಂಧಿ ಮಹಾತ್ಮನಾಗಲು ಬಯಸಿರಲಿಲ್ಲ!" ಎಂದು ಹೊಳಲ್ಕೆರೆ ಆರ್.‌ ಲಕ್ಷ್ಮೀವೆಂಕಟೇಶ ಒತ್ತಿ ಹೇಳುತ್ತಾರೆ."ತುಂಬ ಸುಂದರ ನಿರೂಪಣೆ ಮತ್ತು ವ್ಯಾಖ್ಯಾನ. ಗಾಂಧೀಜಿಯವರ ಬಗ್ಗೆ ದೈವಿಕ ಭಾವ ಅಲ್ಲಗಳೆದರೂ ಅಭಿಮಾನ ತುಂಬಿಕೊಂಡಿದೆ. ಇಲ್ಲ ಇಲ್ಲ ಎಂದುಕೊಂಡೂ ರೋಚಕತೆಯೇ ಹೆಚ್ಚು, ಮುಕ್ತ ಆಲೋಚನೆ ಕಡಿಮೆ" ಎನ್ನುವುದು ಶ್ರೀನಿವಾಸ ಹೆಬ್ಬಾಳರ ಅನಿಸಿಕೆ."ಲೇಖನ ಗಾಂಧಿಯವರ ತಾತ್ವಿಕ ಸೋಲುಗಳನ್ನು ದಾಖಲಿಸುವುದರಲ್ಲಿ ವಿಫಲವಾಗಿದೆ" ಎಂದು ವಿವರಿಸುತ್ತಾರೆ ಕೆ.ಪಿ. ರವಿಕುಮಾರ್.೨. ಗಾಂಧಿ ಮಹಾತ್ಮನಾಗಲು ಬಯಸಿರಲಿಲ್ಲ!ಹೊಳಲ್ಕೆರೆ ಆರ್.‌ ಲಕ್ಷ್ಮೀವೆಂಕಟೇಶ ಹೀಗೆ ಹೇಳುತ್ತಾರೆ"ಗಾಂಧಿ ಒಬ್ಬ ಮುಗ್ಧ, ಹೆಚ್ಚು ತಿಳಿಯದ, ಬಲಶಾಲಿಯಲ್ಲದ, ದುಷ್ಟ ಶಕ್ತಿಗಳಿಗೆ ಹೆದರುವ, ... ಹೀಗೆ, ಭಾರತದ ಇತರ ಎಲ್ಲ ಯುವಕರಂತೆಯೆ ಇದ್ದ. ನಮ್ಮ, ವೈಯಕ್ತಿಕ ಮತ್ತು ರಾಷ್ಟ್ರದ, ಹಿತಕ್ಕಾಗಿ ಗಾಂಧಿಯನ್ನು ಬಳಸಿಕೊಂಡೆವು (ಬಳಸಿಕೊಳ್ಳುತ್ತಿದ್ದೇವೆ.) "ಗಾಂಧಿಯಿಂದಲೆ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು. ಇಲ್ಲದಿದ್ದರೆ ನಾವು ನಮ್ಮ (ವಸುಧೈವ ಕುಟುಂಬಕಂ, ಇತ್ಯಾದಿ) ಸ್ವಂತ ಬೋಧನೆಗಳನ್ನು ಅರ್ಥಮಾಡಿಕೊಳ್ಳದೆ ಗುಲಾಮರಾಗಿ ಬಳಲುತ್ತಿದ್ದೆವು. ನಮ್ಮೆಲ್ಲರಂತೆ, ಗಾಂಧಿಯೂ ವಿದೇಶಿ ಪದವಿಯನ್ನು (ಕಾನೂನಿನಲ್ಲಿ) ಗಳಿಸಲು ಸಲಹೆ ಪಡೆದರು. ತಮ್ಮ ಸುಮಾರು ೧೭ನೇ ಎಳೆ ವಯಸ್ಸಿನಲ್ಲಿ , ಅವರ ತಾಯಿ ದೈನಂದಿನ ಪೂಜೆ ಮಾಡುವಾಗ ಹಾಡುತ್ತಿದ್ದ ಕೀರ್ತನೆಗಳನ್ನು ಹೊರತುಪಡಿಸಿ, ಅವರಿಗೆ ಭಾರತದ ಬಗ್ಗೆ - ಭಗವದ್ಗೀತೆ ಅಥವಾ ಯಾವುದೇ ಮಹಾಕಾವ್ಯಗಳ ಬಗ್ಗೆ - ಏನೂ ತಿಳಿದಿರಲಿಲ್ಲ. ಎಲ್ಲರಂತೆ, ಮನೆಯಿಂದ ಹೊರಬಂದ ನಂತರ, ಜಗತ್ತನ್ನು ಎದುರಿಸಲು ಪ್ರಯತ್ನಿಸುತ್ತಿರುವಾಗ, ಇಂಗ್ಲೆಂಡ್‌ನಲ್ಲಿ ಕಂಡ ಕೆಲವು ಕ್ರಿಶ್ಚಿಯನ್ನರು, ಪಾದ್ರಿಗಳು ಹಿಂದೂ ಧರ್ಮಗ್ರಂಥಗಳಲ್ಲಿ ಏನು ಹೇಳಲಾಗಿದೆ ಎಂದು ತಿಳಿದುಕೊಳ್ಳಲು ಸಹಜವಾಗಿ ಪ್ರಶ್ನಿಸಿದರು. ಏನನ್ನೂ ಹೇಳಲು ಸಾಧ್ಯವಾಗದ ಗಾಂಧಿ ಆಘಾತಕ್ಕೊಳಗಾದರು. ಅದಕ್ಕೆ, ಅವರು ಇಂಗ್ಲೆಂಡ್‌ನ ಪ್ರಮುಖ ವಕೀಲರಾದ ಸರ್ ಫಿರೋಜ್ ಶಾ ಮೆಹ್ತಾ ಅವರಂತಹ ಕೆಲವು ಭಾರತೀಯ ಸ್ನೇಹಿತರನ್ನು ಸಂಪರ್ಕಿಸಿದರು ಮತ್ತು ಗ್ರಂಥಾಲಯಗಳಿಗೆ ಭೇಟಿ ನೀಡುವುದನ್ನು ಆರಂಭಿಸಿದರು. ಸುಮಾರು ಒಂದು ವಾರ ಅಧ್ಯಯನ ಮಾಡಿದ ನಂತರ ನಮ್ಮ ಮಹಾಕಾವ್ಯಗಳ ಬಗ್ಗೆ ಹೇಳುವ ಭಗವದ್ಗೀತೆ ಎನ್ನುವ ಒಂದು ಸಂಕ್ಷಿಪ್ತ ಪಠ್ಯ ಇದೆ ಎಂದು ತಿಳಿಯಿತು. ಅವನ್ನು ತನ್ನ ಕ್ರಿಶ್ಚಿಯನ್ ಸ್ನೇಹಿತರೊಂದಿಗೆ ಚರ್ಚಿಸತೊಡಗಿದಾಗ ತನಗೆ ಎಷ್ಟು ತಿಳಿದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಗಾಂಧಿಯ ಕಾನೂನು ಮತ್ತಿತರ ಮಾನವೀಯ ಪಠ್ಯ ಪುಸ್ತಕಗಳ ಹೊರತಾದ ಕಲಿಕೆ ಪ್ರಾರಂಭವಾದ್ದು ಹೀಗೆ."ದಕ್ಷಿಣ ಆಫ್ರಿಕಾದ ರೈಲಿನಲ್ಲಿ ಪ್ರಯಾಣಿಸುವಾಗ, ತನ್ನ ಕಂಪಾರ್ಟ್‌ಮೆಂಟ್‌ನಿಂದ ಹೊರಹಾಕಲ್ಪಟ್ಟಾಗ ಅನುಭವಿಸಿದ ನಿಜ ನೋವು ಗಾಂಧಿಯ ಪ್ರಪಂಚದ ದೃಷ್ಟಿಕೋನದ ಬದಲಾವಣೆಗೆ ಕ್ರಮೇಣ ಕಾರಣವಾಯ್ತ; ಅದೇ, ಅಂತಿಮವಾಗಿ, ತಾಯಿ ಭಾರತಿಯ ಭವಿಷ್ಯವನ್ನು ಬದಲಾಯಿಸಿತು. "ಭಾರತವು ೧೮೫೭ ರಿಂದ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡುತ್ತಿದ್ದರೂ, ಯಾವುದೇ ಸಂಘಟಿತ ಹೋರಾಟ ಇರಲಿಲ್ಲ. ತಿಲಕ್, ಗೋಖಲೆ, ಸಾವರ್ಕರ್ ಅಥವಾ ಬೋಸ್ ಮತ್ತಿತರರ ಎಲ್ಲ ಹೋರಾಟಗಳು ಅಲ್ಪಕಾಲಿಕವಾಗಿದ್ದವು. ನಿಜವಾದ ಬಲಿಷ್ಠ ಮತ್ತು ಸಮರ್ಥ ನಾಯಕತ್ವ ಗಾಂಧಿಯವರಿಂದಲೇ ಲಭ್ಯವಾಯಿತು. ಬ್ರಿಟಿಷರನ್ನು ಅರಿತು ಮತ್ತು ಬ್ರಿಟಿಷರ ನೀತಿಗಳನ್ನು ಅರ್ಥಮಾಡಿಕೊಂಡಿದ್ದರಿಂದ ಪ್ರತಿ-ಹೋರಾಟವನ್ನು ನಡೆಸಲು ಗಾಂಧಿ ಶಕ್ತರಾಗಿದ್ದರು. ಅದಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದರು. ಅವರ ಕೌಟುಂಬಿಕ ಜೀವನ ನಾಶವಾಯಿತು. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿಲ್ಲ. ಸ್ವತಃ ಕಬ್ಬಿಣದ ಕಂಬಿಗಳ ಹಿಂದೆ ಅನೇಕ ಬಾರಿ ದಿನಗಳೆದರು. "ಗಾಂಧಿಯ ಆದರ್ಶ ತತ್ವಗಳು, ಸ್ವ- ನಂಬಿಕೆ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಸತ್ಯ ಮತ್ತು ಸತ್ಯ ಮಾತ್ರ ಗಾಂಧಿ ನಾಯಕತ್ವದ ದೊಡ್ಡ ಶಕ್ತಿಯಾಗಿದ್ದವು. ಬ್ರಿಟಿಷ ಸರ್ಕಾರ ಲೇಬರ್ ಪಕ್ಷಕ್ಕೆ ಸೇರಿದ್ದು, ವಿಶ್ವಯುದ್ಧದ ದುಷ್ಪರಿಣಾಮ, ಮತ್ತು ಬ್ರಿಟನ್‌ನ ಮೇಲೆ ಅದರ ಪ್ರಭಾವ ಇತ್ಯಾದಿಗಳು ನೆರ
more

Podcast reviews

Read Secret of Kannada ಕನ್ನಡದ ಗುಟ್ಟು Kannadada Guttu podcast reviews


0 out of 5
0 reviews

Podcast sponsorship advertising

Start advertising on Secret of Kannada ಕನ್ನಡದ ಗುಟ್ಟು Kannadada Guttu & sponsor relevant audience podcasts


What do you want to promote?

Ad Format

Campaign Budget

Business Details