1526376065
Uday Gaonkar

Advertise on podcast: Uday Gaonkar

This podcast has
16 episodes
Language
English
Publisher
Uday Gaonkar
Explicit
No
Date created
2020/08/04
Latest episode
2024/01/25
Average duration
6 min.
Release period
94 days

Description

ಜಗತ್ತನ್ನು ಬೆರಗು ಕಣ್ಣಿನಿಂದ ನೋಡುತ್ತಾ ಪ್ರಶ್ನೆಗಳು, ಪ್ರಯೋಗ, ವೀಕ್ಷಣೆಯ ಮೂಲಕವೇ ವಿಜ್ಞಾನವನ್ನು ಕಲಿಯುವ ದಾರಿಯನ್ನು ಆಪ್ತವಾಗಿಸುವ ಪ್ರಯತ್ನವಿದು. ವಿಜ್ಞಾನದ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು , ಹೇಗೆ, ಏಕೆ ಮುಂತಾದ ಪ್ರಶ್ನೆಗಳನ್ನು ಕಟ್ಟಿಕೊಳ್ಳಲು, ಅಂತಹ ಪ್ರಶ್ನೆಗಳನ್ನು ಕೇಳಲು ಅನುಕೂಲವಾಗುವಂತೆ ಶ್ರವ್ಯಾನುಭವವನ್ನು‌ ಒದಗಿಸುವ ಪುಟ್ಟ ಪುಟ್ಟ ಧ್ವನಿ ಮುದ್ರಿಕೆಗಳು ಇಲ್ಲಿವೆ.

Unlock Uday Gaonkar podcast Email contact info,
Listeners & Audience details

Email contact information

Direct podcast contact details

Listeners

Audience numbers & engagement insights

Audience details

Podcast Insights

Podcast episodes

Check latest episodes from Uday Gaonkar podcast


ಗ್ರಂಥಾಲಯಕ್ಕೆ ಗೋಡೆಗಳಿಲ್ಲ
2024/01/25
ಗ್ರಂಥಾಲಯಕ್ಕೆ ಗೋಡೆಗಳಿಲ್ಲ.. ಇಲ್ಲ ಇಲ್ಲ ಇಲ್ಲವೇ ಇಲ್ಲ ಗ್ರಂಥಾಲಯಕ್ಕೆ ಗೋಡೆಗಳಿಲ್ಲ.. ಅಕಾಶಕ್ಕೆ ಅಂಚುಗಳಿಲ್ಲ ಕನಸು ಕಪಾಟಿಗೆ ಬಾಗಿಲೇ ಇಲ್ಲ ಓದುವೆ ನಾನು ಈ ಜಗವನ್ನು ತೆರೆಯುವೆ ಈಗಲೆ ಹೊಸ ಪುಟವನ್ನು ಹಾಳೆಯ ತುಂಬಾ ಹರಡಿದೆ ನೋಡು ನೀಲಿ ಬಾನು, ಹಸುರಿನ ಕಾನು ಇಲ್ಲ ಇಲ್ಲ ಇಲ್ಲವೇ ಇಲ್ಲ ಗ್ರಂಥಾಲಯಕ್ಕೆ ಗೋಡೆಗಳಿಲ್ಲ.. ಕಟ್ಟುವೆ ನಾನು ಪುಸ್ತಕ ಸೇತುವೆ, ಪ್ರೀತಿ ಪದಗಳ ಮನೆಯನ್ನು ಅಜ್ಜನು ಅಜ್ಜಿಯು ಅಮ್ಮ, ಅಪ್ಪನು ತೆರೆಯುತ ಹೋಗುವೆ ಬದುಕನ್ನು ಇಲ್ಲ ಇಲ್ಲ ಇಲ್ಲವೇ ಇಲ್ಲ ಗ್ರಂಥಾಲಯಕ್ಕೆ ಗೋಡೆಗಳಿಲ್ಲ.. ಆಡುವೆ ಅಲ್ಲಿ, ಓಡುವೆ ಇಲ್ಲಿ ಭೂಮ್ಯಾಕಾಶದ ಬಯಲಲ್ಲಿ. ಮಾತು, ಮೋಜು, ಹಾಡು ಎಲ್ಲ ಪುಸ್ತಕವೆಂದರೆ ಅಕ್ಷರವಲ್ಲ. ಇಲ್ಲ ಇಲ್ಲ ಇಲ್ಲವೇ ಇಲ್ಲ ಗ್ರಂಥಾಲಯಕ್ಕೆ ಗೋಡೆಗಳಿಲ್ಲ.. ಬದುಕಿನ ಹೊಲದಲಿ ಮಮತೆಯ ತೋಟ ಬಿತ್ತುವೆ ಈಗ ಪ್ರೀತಿಯ ಬೀಜ ಬೆಳೆಯುವೆ ನಾನು ಸ್ನೇಹದ ಫಸಲು, ಹರಡುವೆ ಎಲ್ಲೆಡೆ ಓದಿನ ಘಮಲು. ಇಲ್ಲ ಇಲ್ಲ ಇಲ್ಲವೇ ಇಲ್ಲ ಗ್ರಂಥಾಲಯಕ್ಕೆ ಗೋಡೆಗಳಿಲ್ಲ.. ಉದಯ ಗಾಂವಕಾರ
ಭಿನ್ನ ಸಾಮರ್ಥ್ಯದ ನನ್ನ ಮಗ
2023/11/27
ಕಲಿಕೆಯ ನ್ಯೂನತೆಯನ್ನು ಗುರುತಿಸಲಾಗದ ಕಾರಣಕ್ಕೆ ಅಂತ‌ ಮಕ್ಕಳು ಪೋಷಕರು ಮತ್ತು ಶಿಕ್ಷಕರರಿಂದ ಬೈಗುಳು ಪಡೆಯುತ್ತಾರೆ. ಕೆಲವು ಸಲ ಹೆತ್ತವರೂ ಮಕ್ಕಳಿಂದಾಗಿ ಶಿಕ್ಷಕರ ಕೋಪಕ್ಕೆ ತುತ್ತಾಗಬೇಕಾಗುತ್ತದೆ. ಜೈವಿಕ ಕಾರಣಕ್ಕಾಗಿ ನಿರ್ದಿಷ್ಟ ಕಲಿಕೆಯಲ್ಲಿ ತೊಂದರೆ ಅನುಭವಿಸುವ ಮಕ್ಕಳು ಸುಖಾಸುಮ್ಮನೆ ಅವಮಾನಕ್ಕೊಳಗಾಗುವುದು ತೀರಾ ಸಾಮಾನ್ಯ ಎಂಬಂತಾಗಿದೆ. ಇದು ಅಂತಹ ಮಗುವಿನ ತಾಯಿಯೊಬ್ಬರ ಮಾತು.
ಕನ್ನಡದೋಳ್ ಭಾವಿಸಿದ ಜನಪದಂ- ಹವ್ಯಕ ಕನ್ನಡ
2023/10/23
ಕನ್ನಡದ ನುಡಿಯೆಂಬುದು ಪಡಿಯಚ್ಚಿನಲ್ಲಿ ಒಡಮೂಡಿದ ಏಕಶಿಲೆಯಂತಹ ಭಾಷೆಯಲ್ಲ. ಹಾಗೆ ನೋಡಿದರೆ, ಕನ್ನಡವೆಂಬುದು ಒಂದೇ ಒಂದು ಭಾಷೆಯೂ ಅಲ್ಲ. ಈ ಮಾತನ್ನು ಎಲ್ಲ ಭಾಷೆಗಳಿಗೂ ಅನ್ವಯಿಸಬಹುದು. ಹಲವು ಆಡುರೂಪುಗಳು, ಹತ್ತಾರು ಭಾಷೆಗಳಿಂದ ಎರವಲು ಪಡೆದ ಪದಗಳು, ಹಲವು ಬಗೆಯ ಧ್ವನಿ ಸಂಚಾರಗಳು, ಭಿನ್ನ ದೇಹಭಾಷೆಗಳು ಹೀಗೆ, ಕನ್ನಡಕ್ಕೆ ದಕ್ಕಿರುವ ಬಹು ಆಯಾಮಗಳ ಚೆಂದವನ್ನು ಕನ್ನಡ ಮಾಸ ನವೆಂಬರಿನಲ್ಲಿ ಟೀಚರ್ ಪತ್ರಿಕೆ ಸಂಭ್ರಮಿಸುತ್ತದೆ. ಕವಿಯತ್ರಿ ಸುಧಾ ಆಡುಕಳ ಅವರ ಹವ್ಯಕ ಕನ್ನಡದ ಬರೆಹಕ್ಕೆ ಶಿಕ್ಷಕಿ, ಬರೆಹಗಾರ್ತಿ ಪ್ರತಿಮಾ ಕೋಮಾರ್ ದನಿಯಾಗಿದ್ದಾರೆ
ಕನ್ನಡದೋಳ್ ಭಾವಿಸಿದ ಜನಪದಂ- ಹೊಸಪೇಟೆ ಕನ್ನಡ
2023/10/23
ಕನ್ನಡದ ನುಡಿಯೆಂಬುದು ಪಡಿಯಚ್ಚಿನಲ್ಲಿ ಒಡಮೂಡಿದ ಏಕಶಿಲೆಯಂತಹ ಭಾಷೆಯಲ್ಲ. ಹಾಗೆ ನೋಡಿದರೆ, ಕನ್ನಡವೆಂಬುದು ಒಂದೇ ಒಂದು ಭಾಷೆಯೂ ಅಲ್ಲ. ಈ ಮಾತನ್ನು ಎಲ್ಲ ಭಾಷೆಗಳಿಗೂ ಅನ್ವಯಿಸಬಹುದು. ಹಲವು ಆಡುರೂಪುಗಳು, ಹತ್ತಾರು ಭಾಷೆಗಳಿಂದ ಎರವಲು ಪಡೆದ ಪದಗಳು, ಹಲವು ಬಗೆಯ ಧ್ವನಿ ಸಂಚಾರಗಳು, ಭಿನ್ನ ದೇಹಭಾಷೆಗಳು ಹೀಗೆ, ಕನ್ನಡಕ್ಕೆ ದಕ್ಕಿರುವ ಬಹು ಆಯಾಮಗಳ ಚೆಂದವನ್ನು ಕನ್ನಡ ಮಾಸ ನವೆಂಬರಿನಲ್ಲಿ *ಟೀಚರ್ ಪತ್ರಿಕೆ* ಸಂಭ್ರಮಿಸುತ್ತದೆ. ಹಾವೇರಿಯವರಾದ ಸುಜಾತಾ ಗಿಡ್ಡಪ್ಪಗೌಡ್ರು ಕಲಿತದ್ದು ಧಾರವಾಡದಲ್ಲಿ. ಈಗಿರುವುದು ಹೊಸಪೇಟೆಯ ಕಮಲಾಪುರದಲ್ಲಿ. ಉತ್ತರ ಕರ್ನಾಟಕದ ಎಲ್ಲ ಕಡೆಗಳಲ್ಲೂ ಧಾರವಾಡ ಕನ್ನಡ ಮಾತಾನಾಡುತ್ತಾರೆಂಬ ತಪ್ಪುತಿಳುವಳಿಕೆ ಎಲ್ಲರಲ್ಲಿದೆ. ಬೀದರಿನ ಕನ್ನಡವೇ ಬೇರೆ ಹೊಸಪೇಟೆಯ ಕನ್ನಡವೇ ಬೇರೆ.
ಕನ್ನಡದೋಳ್ ಭಾವಿಸಿದ ಜನಪದಂ-ಕುಂದಾಪ್ರ ಕನ್ನಡ
2023/10/23
ಕನ್ನಡದ ಬದುಕೆಂದರೆ ಒಂದು ಭಾಷಿಕ ಸಮುದಾಯವಷ್ಟೇ ಅಲ್ಲ. ಕನ್ನಡವೆಂಬುದು ಪಡಿಯಚ್ಚಿನಲ್ಲಿ ಒಡಮೂಡಿದ ಒಂದೇ ಒಂದು ಭಾಷೆಯಲ್ಲ. ಕನ್ನಡದ ಅನುಭವದಲ್ಲಿ ಹಲವು ಆಡುರೂಪಗಳಿವೆ. ಎಲ್ಲ ಆಡುರೂಪಗಳೂ ಮುಖ್ಯ. ಕೃಷ್ಣ ಡಿ.ಎಸ್ ಕುಂದಾಪ್ರ ಕನ್ನಡದ ತಮ್ಮದೇ ಬರೆಹವನ್ನು ವಾಚಿಸಿದ್ದಾರೆ. ಈ ಬರೆಹ ಹೇಗೆ ಮಕ್ಕಳ ಮೇಲೆ ಸಮಾಜವು ಮೇಲು- ಕೀಳೆಂಬ ಜಾತಿಪ್ರಜ್ಞೆಯನ್ನು ತುಂಬಿಸುತ್ತದೆ ಎಂಬುದನ್ನು ಪುಟ್ಟ ಪ್ರಸಂಗದ ಮೂಲಕ ಕಟ್ಟಿಕೊಡುತ್ತದೆ.
ಕನ್ನಡದೋಳ್ ಭಾವಿಸಿದ ಜನಪದಂ- ಮಂಗಳೂರು ಕನ್ನಡ
2023/10/22
ಕನ್ನಡದ ಬದುಕೆಂದರೆ ಒಂದು ಭಾಷಿಕ ಸಮುದಾಯವಷ್ಟೇ ಅಲ್ಲ. ಕನ್ನಡವೆಂಬುದು ಪಡಿಯಚ್ಚಿನಲ್ಲಿ ಒಡಮೂಡಿದ ಒಂದೇ ಒಂದು ಭಾಷೆಯಲ್ಲ. ಕನ್ನಡದ ಅನುಭವದಲ್ಲಿ ಹಲವು ಆಡುರೂಪಗಳಿವೆ. ಎಲ್ಲ ಆಡುರೂಪಗಳೂ ಮುಖ್ಯ. ಮಂಗಳೂರು ಕನ್ನಡದ ಪ್ರೇಮನಾಥ‌ ಮರ್ಣೆಯವರ ಬರೆಹವನ್ನು ಅಕ್ಷತಾ ಕುಡ್ಲ ಸೊಗಸಾಗಿ ವಾಚಿಸಿದ್ದಾರೆ.
ನೀಲಿ ಚುಕ್ಕಿಯ ನೆರಳು
2022/04/05
‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ಗೆ ಭಾಜನರಾಗಿರುವ ಶ್ರೀಮತಿ. ಮಧುರಾಣಿ ಹೆಚ್.ಎಸ್ ಅವರು ಮೂಲತಃ ದಾವಣಗೆರೆ ಸೀಮೆಯವರಾಗಿದ್ದು ಪ್ರಸ್ತುತ ಮೈಸೂರಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಕನ್ನಡದ ಹೆಮ್ಮೆಯ ಕವಿ ಡಾ. ಎಚ್. ಎಸ್ ಶಿವಪ್ರಕಾಶ್ ಅವರು ಈ ಹೊತ್ತಿಗೆಯ ಕಾವ್ಯ ಪ್ರಶಸ್ತಿಯ ತೀರ್ಪುರಗಾರರಾಗಿದ್ದರು. ಇದು ಈ ಹೊತ್ತಿಗೆಯ ಮೊದಲ ಕಾವ್ಯ ಪ್ರಶಸ್ತಿಯಾಗಿದೆ.
Makkaligagi Mahatma ಮಕ್ಕಳಿಗಾಗಿ ಮಹಾತ್ಮ
2022/02/11
ಮಕ್ಕಳು ಗಾಂಧಿ ಓದಿಗೆ ಹೊರಳುವಂತೆ ಪ್ರೇರೇಪಿಸುವ ಸಲುವಾಗಿ ರಚಿಸಿದ ಪುಸ್ತಕ- ಮಕ್ಕಳಿಗಾಗಿ ಮಹಾತ್ಮ. ಇದರಲ್ಲಿ 51 ಅಧ್ಯಾಯಗಳಿವೆ. ಅನೇಕ ವಿದ್ಯಾರ್ಥಿಗಳು ತಮ್ಮ ಧ್ವನಿಯಲ್ಲಿ‌ ಈ ಅಧ್ಯಾಯಗಳನ್ನು ಮರುಕಟ್ಟಿದ್ದಾರೆ. ಇಲ್ಲಿ ಅದನ್ನು ಕೇಳಬಹುದು..
ಶೇಖರಣೆಯಾಗುತ್ತಾ ಹೋದಂತೆ ಸಂಪತ್ತು ..
2021/10/09
ಹಣ ಹೇಗೆ ನಮ್ಮ ಸಂವೇದನೆಗಳ ಮೇಲೆ ದಾಳಿಯಿಡುತ್ತಾ ನಮ್ಮನ್ನು ಅಸೂಕ್ಷ್ಮಗೊಳಿಸುತ್ತಾ ಹೋಗುತ್ತದೆ ಎಂಬುದನ್ನು ಕವಿ ವಸಂತ ಬನ್ನಾಡಿ ಚೆಂದದಲ್ಲಿ ಕಟ್ಟಿದ್ದಾರೆ
ಗಾಂಧಿ ಓದು ಮಾಲಿಕೆ
2021/09/26
ಓದು: ರವೀಂದ್ರ ಕೋಡಿ
ಬುರ್ಕಾ- ರಮೇಶ ಗುಲ್ವಾಡಿ
2021/07/18
ಬುರ್ಕಾ ಎಂಬ ಕಪ್ಪು ಬಟ್ಟೆ ಗಂಡಾಳಿಕೆಯ ಮನಸ್ಥಿತಿಯನ್ನು ಬಯಲು ಮಾಡುವುದು ಮಾತ್ರವಲ್ಲ. ಅದು ರುಖಿಯಾಳ ಬಡತನವನ್ನೂ ಮುಚ್ಚುತ್ತದೆ. ನಮ್ಮ ದೃಷ್ತಿಗೆ ಅನೇಕ ಕೋನಗಳ ನೋಟವನ್ನು ಒದಗಿಸುವ ಇಂತಹ ಕತೆಗಳು ನಮ್ಮನ್ನು ಸೂಕ್ಷ್ಮಗೊಳಿಸುತ್ತಾ ಅದೇ ಕಾಲಕ್ಕೆ ಸ್ಪಷ್ಟಗೊಳಿಸುತ್ತಾ ಹೋಗುತ್ತವೆ.
ರಂಗಭೂಮಿ ದಿನದ ಸಂದೇಶ- ಹೆಲೆನ್ ಮಿರ್ರೆನ್
2021/03/27
“This has been such a very difficult time for live performance and many artists, technicians, and craftsmen and women have struggled in a profession that is already fraught with insecurity. Maybe that always present insecurity has made them more able to survive this pandemic with wit and courage. Their imagination has already translated itself, in these new circumstances, into inventive, entertaining, and moving ways to communicate, thanks of course in large part to the internet. Human beings have told each other stories for as long as they have been on the planet. The beautiful culture of theatre will live for as long as we stay here. The creative urge of writers, designers, dancers, singers, actors, musicians, directors, will never be suffocated and in the very near future will flourish again with a new energy and a new understanding of the world we all share. I can’t wait!”

Podcast reviews

Read Uday Gaonkar podcast reviews


0 out of 5
0 reviews

Podcast sponsorship advertising

Start advertising on Uday Gaonkar relevant audience podcasts


What do you want to promote?